ಭಾರತೀಯ ಗಗನಯಾತ್ರಿಗಳಿಗೆ ಮೈಸೂರಿನಲ್ಲಿ ಸಿದ್ಧವಾಗ್ತಿದೆ ಆಹಾರ..!

ನವದೆಹಲಿ: ಇಸ್ರೋ ಮಾನವಸಹಿತ ಗಗನಯಾನಕ್ಕೆ ರೆಡಿಯಾಗಿದೆ. ಈಗಾಗಲೇ ಬಾಹ್ಯಾಕಾಶಕ್ಕೆ ಕಳುಹಿಸಲು ನಾಲ್ಕು ಜನರನ್ನು ಆಯ್ಕೆ ಕೂಡ ಮಾಡಿದೆ. ಬಾಹ್ಯಾಕಾಶಕ್ಕೆ ತೆರಳುವವರು ಇಂಡಿಯಾನ್​ ಫುಡ್​ ಮಿಸ್​​ ಮಾಡಿಕೊಳ್ಳಬಾರದೆಂದು ಅವರಿಗೆ ತಿನ್ನಲು ಇಡ್ಲಿ-ಉಪ್ಪಿಟ್ಟು ಪಲಾವ್​ ಸೇರಿದಂತೆ 30 ಬಗೆಯ ಖಾದ್ಯಗಳನ್ನು ಸಿದ್ಧಪಡಿಸಲಾಗಿದೆ.

ಬಾಹ್ಯಾಕಾಶಕ್ಕೆ ತೆರಳಿರುವ ಗಗಯಾತ್ರಿಗಳ ಮೈಸೂರಿನ ಡಿಫೆನ್ಸ್ ಫುಡ್​ ರಿಸರ್ಚ್​ ಲ್ಯಾಬೊರೇಟರಿ ಆಹಾರವನ್ನು ರೆಡಿಮಾಡಿದೆ. ಪ್ರಮುಖವಾಗಿ ದಕ್ಷಿಣ ಭಾರತದ ಫೇಮಸ್​​​ ತಿಂಡಿಯಾದ ಇಡ್ಲಿ, ಉಪ್ಪಿಟ್ಟನ್ನು ಎಗ್​ರೋಲ್,​ ವೆಜ್​ ರೋಲ್, ಮೂಂಗ್​ ದಾಲ್​ ಹಲ್ವಾ, ವೆಜ್​ ಪಲಾವನ್ನು ಗಗನಯಾತ್ರಿಗಳಿಗೆಂದು ತಯಾರು ಮಾಡಲಾಗಿದೆ. ಅಲ್ಲದೆ ಆಹಾರವನ್ನು ಬಿಸಿ ಮಾಡಿಕೊಳ್ಳಲು ಹೀಟರ್​ ಕೂಡ ಕಳುಹಿಸಿಕೊಡಲಾಗುತ್ತಿದೆಯಂತೆ.

ಅಲ್ಲಿನ ಹವಾಮಾನಕ್ಕೆ ಸೂಕ್ತವಾಗುವಂತೆ ಎಲ್ಲಾ ಆಹಾರವನ್ನು ಲ್ಯಾಬೋರೇಟರಿ ತಯಾರು ಮಾಡಿದ್ದು, ದ್ರವ ಆಹಾರ ಸೇವಿಸಲು ಬೇಕಾದ ವ್ಯವಸ್ಥೆಯನ್ನು ಸಹ ಮಾಡಲಾಗಿದೆಯಂತೆ. 2020ರ ಭಾರತದ ಮಹತ್ವಾಕಾಂಕ್ಷಿ ಯೋಜನೆಯಾದ ಮಾನವಸಹಿತ ಗಗನಯಾತ್ರೆಗೆ ಈಗಾಗಲೇ ಇಸ್ರೋ ಸಕಲ ರೀತಿಯಲ್ಲೂ ತಯಾರಿ ನಡೆಸುತ್ತಿದೆ.

Leave a Comment

Scroll to Top