ಮೈಸೂರು: ಕೇಂದ್ರ ಸರ್ಕಾರ ಕೊರೊನಾ ಸೋಂಕು ಕುರಿತಾದ ಝೋನ್’ಗಳ ಪರಿಷ್ಕೃತ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪೈಕಿ ದೇಶದ 130 ಜಿಲ್ಲೆಗಳನ್ನು ರೆಡ್ ಝೋನ್, 284 ಆರೆಂಜ್ ಝೋನ್, 319 ಗ್ರೀನ್ ಝೋನ್ ಗಳೆಂದು ಘೋಷಿಸಲಾಗಿದೆ.
ರಾಜ್ಯದ ಮೈಸೂರು, ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಮಾತ್ರ ರೆಡ್ ಝೋನ್ ಪಟ್ಟಿಲ್ಲಿವೆ. ಕಿತ್ತಲೆ ವಲಯ(ಆರೆಂಜ್ ಝೋನ್) 13 ಜಿಲ್ಲೆಗಳು, ಹಸಿರು ವಲಯ(ಗ್ರೀನ್ ಝೋನ್) 14 ಜಿಲ್ಲೆಗಳನ್ನು ಈ ಪರಿಷ್ಕೃತ ಪಟ್ಟಿಯಲ್ಲಿ ಸೇರಿಸಲಾಗಿದೆ.
ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ 19 ಜಿಲ್ಲೆಗಳು ರೆಡ್ ಝೋನ್ ಪಟ್ಟಿಯಲ್ಲಿವೆ. ಮಹಾರಾಷ್ಟ್ರದಲ್ಲಿ 14, ತಮಿಳುನಾಡಿನಲ್ಲಿ 12, ದೆಹಲಿಯಲ್ಲಿ 11 ಹಾಗೂ ಕರ್ನಾಟಕದಲ್ಲಿ 3 ಜಿಲ್ಲೆಗಳು ರೆಡ್ ಝೋನ್ ನಲ್ಲಿವೆ.