ಮೈಸೂರು: ಹೆಣ್ಣೊಂದು ಕಲಿತರೆ, ಶಾಲೆಯೊಂದು ತೆರೆದಂತೆ ಎಂಬಂತೆ ಸ್ತ್ರೀಯರ ಶಿಕ್ಷಣ ಮತ್ತು ಅಭಿವೃದ್ಧಿಯು ದೇಶದ ಅಭಿವೃದ್ಧಿಗೆ ನಾಂದಿ ಎಂಬ ಮಾತುಗಳನ್ನು ನಾವು ಕೇಳಿರುತ್ತೇವೆ. ಈ ಮಾತುಗಳನ್ನು ನಿಜವಾಗಿಸಲು ಮೈಸೂರಿನ ಸ್ಫೂರ್ತಿ ಫೌಂಡೇಶನ್ ಹಲವು ಯೋಜನೆಗಳ ಮೂಲಕ ಮಹಿಳೆಯರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ.
ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ನೆರವಾಗಬೇಕು. ಅವರು ಗುಣಮಟ್ಟದ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಗೆ ಬರೆಬೇಕು ಎಂಬ ಪರಿಕಲ್ಪನೆಯಿಂದ ಎಂಜಿನಿಯರಿಂಗ್ ಪದವೀಧರರಿಂದ ಆರಂಭವಾದ ಸ್ಫೂರ್ತಿ ಫೌಂಡೇಷನ್ ಹಲವಾರು ಯೋಜನೆಗಳನ್ನು ಹಾಕಿಕೊಂಡು ಕಾರ್ಯ ನಿರ್ವಹಿಸುತ್ತಿದೆ.
ಅಂತಹ ಯೋಜನೆಯ ಅಡಿಯಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಸ್ಫೂರ್ತಿ ಫೌಂಡೇಶನ್ “ಶೇರ್ ಎ ಡ್ರೀಮ್ – ಕಲ್ಪನಾ ಚಾವ್ಲಾ ವಿದ್ಯಾರ್ಥಿವೇತನ ಕಾರ್ಯಕ್ರಮ” ವನ್ನು ಹಾಕಿಕೊಂಡಿದೆ.
ಈಗಾಗಲೆ ಈ ಕಾರ್ಯಕ್ರಮದ ಅಡಿಯಲ್ಲಿ ನಗರದ ಬನುಮಯ್ಯ ಬಾಲಕೀಯರ ಪ್ರೌಢಶಾಲೆ 12 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ತಿಂಗಳಿಗೆ 250 ರೂ. ವಿದ್ಯಾರ್ಥಿವೇತನವನ್ನು ನೀಡಿದೆ. ಕಳೆದ ವಾರ ಬಂದಂತಹ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ 11 ಬಾಲಕೀಯರು ಉತ್ತಮ ಸಾಧನೆ ತೋರಿದ್ದಾರೆ. ಆದರೆ ಅನಾರೋಗ್ಯದ ಕಾರಣ ಒಬ್ಬಳು ಅನ್ನುತ್ತೀರ್ಣಳಾಗಿದ್ದಾಳೆ.
ಫಲಿತಾಂಶ ಹೊರಬಂದ ನಂತರ, ವಿದ್ಯಾರ್ಥಿಗಳು ಹಾಗೂ ಅವರ ಪೋಷಕರೊಂದಿಗೆ ಮುಂದಿನ ಗುರಿಯ ಬಗ್ಗೆ ಚರ್ಚಿಸಿ 11 ವಿದ್ಯಾರ್ಥಿಗಳ ಮುಂದಿನ ವಿಧ್ಯಾಭ್ಯಾಸಕ್ಕು ಸಹಾಯ ಮಾಡುತ್ತಿದೆ ಸ್ಫೂರ್ತಿ ಫೌಂಡೇಶನ್. ಇದಕ್ಕಾಗಿ ಪ್ರತಿ ಶೈಕ್ಷಣಿಕ ವರ್ಷದ 50% ರಷ್ಟು(ಸುಮಾರು ₹ 27500) ಕಾಲೇಜು ಶುಲ್ಕವನ್ನು ಪಾವತಿಸಲು ನಿರ್ಧರಿಸಿದ್ದಾರೆ. ಈ ಹಣ ಮುಂದಿನ 5 ವರ್ಷಗಳಿಗೆ ಬೇಕಾಗಿದ್ದು ಧಾನಿಗಳ ಸಹಾಯಹಸ್ತದ ನಿರೀಕ್ಷೆಯಲ್ಲಿದೆ ಸ್ಫೂರ್ತಿ ಫೌಂಡೇಶನ್.
ಹಾಗೆಯೇ ಸ್ಫೂರ್ತಿ ಫೌಂಡೇಶನ್ ನಡೆಸುತ್ತಿರುವ ಈ ಮಹತ್ಕಾರ್ಯದಲ್ಲಿ ನೀವು ಭಾಗಿಯಾಗುವ ಆಸಕ್ತಿ ಇದ್ದಲ್ಲಿ ಸ್ವಯಂಸೇವಕರಾಗಿ ಸೇರಿಕೊಳ್ಳಿ.
ಸಂಪರ್ಕಿಸಲು: 9741939815