ಮೈಸೂರಿನಲ್ಲಿ ಕೋವಿಡ್ ಲಸಿಕಾ ಅಭಿಯಾನಕ್ಕೆ ಚಾಲನೆ: ಮೊದಲ ಲಸಿಕೆ ಪಡೆದ ಆ್ಯಂಬುಲೆನ್ಸ್ ಚಾಲಕ

ಮೊದಲ ಲಸಿಕೆ ಪಡೆದ ಆ್ಯಂಬುಲೆನ್ಸ್ ಚಾಲಕ ಸಂದೇಶ್

ಮೈಸೂರು: ಕೊರೊನಾ ಮಹಾಮಾರಿ ತಡೆಗೆ ದೇಶಾದ್ಯಂತ ಅತಿದೊಡ್ಡ ಕೊರೋನಾ ಲಸಿಕಾ ಅಭಿಯಾನಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಚಾಲನೆ ನೀಡಿದ್ದು ಮೈಸೂರಿನಲ್ಲೂ ಸಹ ಲಸಿಕಾ ಅಭಿಯಾನಕ್ಕೆ ಚಾಲನೆ ದೊರೆತಿದೆ.

ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂದೂರಿ ಅವರು ಟ್ರಾಮಾ ಕೇರ್ ಸೆಂಟರ್ನಲ್ಲಿ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದರು. ಜಿಲ್ಲೆಯ 9 ಕೇಂದ್ರಗಳ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಮೊದಲ ಲಸಿಕೆಯನ್ನು ಕೆ.ಆರ್.ಆಸ್ಪತ್ರೆಯ ಆ್ಯಂಬುಲೆನ್ಸ್ ಚಾಲಕ ಸಂದೇಶ್ ಎಂಬವರು ಪಡೆದರು. ಲಸಿಕೆ ಪಡೆದು ಅರ್ಧ ಗಂಟೆಗಳ ಕಾಲ ನಿಗಾ ಘಟಕದಲ್ಲಿದ್ದರು.

Scroll to Top