
ಮೈಸೂರು: ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ಅಧಿಕಾರಿಗಳು ಹೊಸ ಸಾಧನೆ ಮಾಡಿದ್ದಾರೆ. ವಿಶೇಷ ಲಾರಿಯಲ್ಲಿ ಜಿರಾಫೆಯನ್ನು ಅಸ್ಸಾಂ ರಾಜ್ಯದ ಗೌಹಾತಿಗೆ ಸ್ಥಳಾಂತರ ಮಾಡಿದ್ದಾರೆ. ಇಷ್ಟು ದೂರು ಜಿರಾಫೆಯನ್ನು ತೆಗೆದುಕೊಂಡು ಹೋಗಿದ್ದು, ದೇಶದಲ್ಲಿ ಇದೇ ಮೊದಲು.

ಮೈಸೂರಿನಿಂದ 3,200 ಕಿ. ಮೀ. ದೂರದ ಗೌಹಾತಿಗೆ ಜಿರಾಫೆಯನ್ನು ಕಳಿಸಲಾಗಿದೆ. ಕರ್ನಾಟಕ ಮೃಗಾಲಯ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ಪ್ರಕಾರ ದೇಶದಲ್ಲಿಯೇ ಜಿರಾಫೆಯನ್ನು ಹೆಚ್ಚು ದೂರಕ್ಕೆ ಸ್ಥಳಾಂತರ ಮಾಡಿದ ದಾಖಲೆ ಇದಾಗಿದೆ. ಅಸ್ಸಾಂನಲ್ಲಿರುವ ಗೌಹಾತಿಯ ಮೃಗಾಲಯ ಮತ್ತು ಬೋಟಾನಿಕಲ್ ಗಾರ್ಡನ್‌ಗೆ ಮೈಸೂರು ಮೃಗಾಲಯದಿಂದ ಜಿರಾಫೆ ಕಳಿಸಲಾಗಿದೆ. 14 ತಿಂಗಳ 12 ಅಡಿ ಎತ್ತರದ ಗಂಡು ಜಿರಾಫೆಯನ್ನು ಗೌಹಾತಿಗೆ ವಿಶೇಷ ಲಾರಿಯಲ್ಲಿ ಕಳಿಸಲಾಗಿದೆ.
Commendable job, Congratulations Team #Mysuruzoo. Longest ever #giraffe transport in India. #Jayachamarajendra safely teansported from Mysuru to Guwathi zoo #3200kms, #12feet tall, #14months old, 7 nights, 8 days journey led by #DrRamesh, AD@aranya_kfd @moefcc @waza pic.twitter.com/5Ur8IgGjBz
— Zoos of Karnataka (@ZKarnataka) December 5, 2019
ಏಳು ರಾತ್ರಿ, ಎಂಟು ಹಗಲು ಪ್ರಯಾಣ ಮಾಡಿ ಜಿರಾಫೆ ಗೌಹಾತಿ ತಲುಪಿದೆ. ಏಳು ಸಿಬ್ಬಂದಿಗಳು, ವೈದ್ಯರಾದ ಡಾ. ರಮೇಶ್ ಜಿರಾಫೆ ಜೊತೆಗಿದ್ದು, ಅದರ ಯೋಗಕ್ಷೇಮ ನೋಡಿಕೊಂಡರು ಎಂದು ಮೃಗಾಲಯದ ಸಿಬ್ಭಂದಿಗಳು ಹೇಳಿದ್ದಾರೆ.
ಗೌಹಾತಿ ಮೃಗಾಲಯದಲ್ಲಿ ಎಂಟು ವರ್ಷಗಳಿಂದ ಯಾವುದೇ ಜಿರಾಫೆ ಇರಲಿಲ್ಲ. ಪ್ರಾಣಿ ವಿನಿಮಯ ಯೋಜನೆಯಡಿ ಜಿರಾಫೆಯನ್ನು ನೀಡಲಾಗಿದ್ದು, ಅಸ್ಸಾಂನಿಂದ ಘೆಂಡಾಮೃಗವನ್ನು ಮೈಸೂರಿನ ಮೃಗಾಲಯಕ್ಕೆ ತರಲಾಗುತ್ತಿದೆ.
ಹಿಂದೆ ಮೈಸೂರಿನಿಂದ ಲಕ್ನೋ, ಪಾಟ್ನಾಗೆ ಜಿರಾಫೆಯನ್ನು ಕಳುಹಿಸಲಾಗಿತ್ತು. ಪ್ರಾಣಿಗಳ ಸಾಗಣೆಗೆಂದೇ ಲಾರಿಯನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಪ್ರಯಾಣದ ಸಮಯದಲ್ಲಿ ಪ್ರಾಣಿಗಳಿಗೆ ಯಾವುದೇ ಒತ್ತಡ ಉಂಟಾಗದಂತೆ ಇದು ತಡೆಯುತ್ತದೆ.
You must be logged in to post a comment.