ಮೈಸೂರು: ಕೊರೋನಾ ಲಾಕ್’ಡೌನ್ ಹಿನ್ನಲೆ ಆಹಾರ ಸಿಗದೆ ಸಂಕಷ್ಟದಲ್ಲಿದ್ದ ಚಾಮುಂಡಿ ಬೆಟ್ಟದಲ್ಲಿನ ಪ್ರಾಣಿ-ಪಕ್ಷಿಗಳಿಗೆ ಮೈಸೂರಿನ ಯುವಕನೋರ್ವ ಕಳೆದ 50 ದಿನಗಳಿಂದ ಆಹಾರ ನೀಡಿ ಮಾನವೀಯತೆ ಮೆರೆದಿದ್ದಾನೆ.
ಚಾಮುಂಡಿ ಬೆಟ್ಟದಲ್ಲಿನ ನೂರಾರು ಕೋತಿಗಳು, ಹಸು, ನಾಯಿಗಳು ದೇವಸ್ಥಾನಕ್ಕೆ ಆಗಮಿಸವವರು ನೀಡುತ್ತಿದ್ದ ಆಹಾರವನ್ನೆ ನೆಚ್ಚಿಕೊಂಡಿದ್ದವು. ಆದರೆ ಲಾಕ್’ಡೌನ್ ಕಾರಣ ಇವುಗಳಿಗೆ ಆಹಾರವೇ ಸಿಗದಂತಾಗಿತ್ತು.
ಈಗಾಗಿ ನಗರದ ಅಕ್ಷಯ ಭಂಡಾರ್ ನಿವಾಸಿ ಎಂಜಿನಿಯರಿಂಗ್ ಪದವೀದರ ಹಾಗೂ ಚೆಸ್ ಬಾಕ್ಸಿಂಗ್ ಪಟು ಸಂಜಯ್ ಕುಮಾರ್ ಎಂ.ಕೆ ಎಂಬಾತ ಚಾಮುಂಡಿಬೆಟ್ಟದಲ್ಲಿನ ಪ್ರಾಣಿ-ಪಕ್ಷಿಗಳಿಗೆ ಕಳೆದ 50 ದಿನಗಳಿಂದ ಆಹಾರ ನಿಡುತ್ತಿದ್ದಾರೆ. ತಮ್ಮ ಸ್ವಂತ ಹಣದಲ್ಲಿ ಬೆಟ್ಟದಲ್ಲಿನ ಕೋತಿ, ಹಸು, ನಾಯಿಗಳಿಗೆ ಟೊಮೋಟೊ, ಬಾಳೆಹಣ್ಣು, ಬಿಸ್ಕೇಟ್ ನೀಡುತ್ತಾ ಬರುತ್ತಿದ್ದಾರೆ. ಅಲ್ಲದೆ ಪಕ್ಷಿಗಳಿಗೂ ಆಹಾರ ನೀಡಿ ಕುಡಿಯಲು ನಿರಿನ ವ್ಯವಸ್ಥೆ ಮಾಡುತ್ತಿದ್ದಾರೆ. ಈ ಸೇವೆಯನ್ನ ಗಮನಿಸಿದ ಇವರ ಸ್ನೇಹಿತರು ಕೂಡ ಇದಕ್ಕೆ ಸಹಕರಿಸುತ್ತಿದ್ದಾರೆ.
ಕೊರೋನಾ ಮಾಹಾಮಾರಿಯ ಕಾರಣದಿಂದ ಇಡೀ ದೇಶವೆ ಸ್ಥಬ್ದವಾಗಿತ್ತು. ಮನುಷ್ಯರೇ ಓಡಾಡಲು ಕಷ್ಟವಾಗಿರುವಾಗ ಸಾರ್ವಜನಿಕರು ಹಾಕುತ್ತಿದ್ದ ಆಹಾರವನ್ನೇ ನಂಬಿರುವ ಪ್ರಾಣಿಪಕ್ಷಿಗಳಿಗೆ ಸಂಕಷ್ಟವಾಗಿದ್ದು ಇಂತಹ ಪ್ರಾಣಿಪಕ್ಷಿಗಳಿಗೆ ಆಹಾರ ಒದಗಿಸಿ ಎಲ್ಲರು ಮೆಚ್ಚುವಂತ ಕೆಲಸವನ್ನ ಮಾಡುತ್ತಿದ್ದಾರೆ ಸಂಜಯ್.