helicopter-ride-in-mysuru-3

ಕೊರೋನಾ ಮುಕ್ತ ಜಿಲ್ಲೆಯತ್ತ ಮೈಸೂರು ದಾಪುಗಾಲು..!

ಮೈಸೂರು: ಅರಮನೆ ನಗರಿ ಮೈಸೂರು ಕರೋನಾ ಮುಕ್ತ ಜಿಲ್ಲೆಯತ್ತ ದಾಪುಗಾಲು ಹಾಕುತ್ತಿದೆ. ಕಳೆದ 6 ದಿನಗಳಿಂದ ಯಾವುದೇ ಹೊಸ ಪ್ರಕರಣ ಪತ್ತೆಯಾಗಿಲ್ಲ. ಈ‌ ನಡುವೆ ನಿನ್ನೆ ಮತ್ತಿಬ್ಬರು ಕೊರೋನಾ ಸೋಂಕಿತರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಒಟ್ಟು 90 ಮಂದಿ ಸೋಂಕಿತರಿಗೆ ಚಿಕಿತ್ಸೆ ನೀಡಿದ್ದ ವೈದ್ಯರುಗಳು ಈವರಗೆ 79 ಮಂದಿಯನ್ನ ಗುಣಮುಖರನ್ನಾಗಿಸಿ ಡಿಸ್ಚಾರ್ಜ್ ಮಾಡಿದ್ದಾರೆ. ಸದ್ಯ 11 ಮಂದಿಗೆ ಮಾತ್ರ ಐಸೋಲೇಟೆಡ್ ವಾರ್ಡ್ ನಲ್ಲಿ ಚಿಕಿತ್ಸೆ ಮುಂದುವರಿದಿದ್ದು ಜಿಲ್ಲೆಯ ಜನರು ನೆಮ್ಮದಿಯ ನಿಟ್ಟುಸಿರುಬಿಡುತ್ತಿದ್ದಾರೆ.

ಇದರ ನಡುವೆ ಲಾಕ್ಡೌನ್ ಸಡಿಲಿಕೆಯಿಂದ ಜನಜೀವನ ಚುರುಕುಗೊಂಡಿದೆ. ಕಟ್ಟಡ ನಿರ್ಮಾಣ ಕಾಮಗಾರಿ, ಕೈಗಾರಿಕಾ ಚಟುವಟಿಕೆಗಳಿಗೆ ರಿಲ್ಯಾಕ್ಸ್ ನೀಡಿದ ಹಿನ್ನೆಲೆ ಜನರು ಎಂದಿನಂತೆ ಓಡಾಟ‌ನಡೆಸುತ್ತಿಸ್ದಾರೆ.

ಬಡಾವಣೆಗಳಲ್ಲಿ ಅಗತ್ಯ, ಅಗತ್ಯೇತರ ವಸ್ತುಗಳ ಮಾರಾಟ ಮಳಿಗೆಗಳನ್ನು ತೆರೆಯಲು ಅನುಮತಿ ಸಿಕ್ಕ ಹಿನ್ನೆಲೆ ಜನಜೀವನ ಸಹಜ‌ ಸ್ಥಿತಿಗೆ ಮರಳುತ್ತಿದೆ. ದೇವರಾಜ ಅರಸ್ ರಸ್ತೆ, ಸಯ್ಯಾಜಿರಾವ್ ರಸ್ತೆ ಸೇರಿ ನಗರದ ಹೃದಯ ಭಾಗದಲ್ಲಿ ಲಾಕ್ ಡೌನ್ ಮುಂದುವರಿಕೆ ಹಿನ್ನೆಲೆ ಕಟ್ಟುನಿಟ್ಟಿನ ಕ್ರಮ ಪಾಲಿಸಲಾಗುತ್ತಿದೆ. ಒಟ್ಟಾರೆ, ಕೆಲವೇ ದಿನಗಳಲ್ಲಿ ರೆಡ್ ಝೋನ್ ನಿಂದ ಮೈಸೂರು ಹೊರಬರಲಿರುವ ಲಕ್ಷಣಗಳು ಗೋಚರಿಸುತ್ತಿವೆ.

Leave a Comment

Scroll to Top