ಇಂದು ವಿಶ್ವ ಛಾಯಾಗ್ರಹಣ ದಿನ: ನಮ್ಮ ಮೈಸೂರು ಆನ್ಲೈನ್’ನಲ್ಲಿ ವೈರಲ್ ಆದ ಫೋಟೋಗಳಿವು!

ಮೈಸೂರು: ಆಗಸ್ಟ್ 19, 2020 ಇಂದು ವಿಶ್ವ ಛಾಯಾಗ್ರಾಹಕರ ದಿನಾಚರಣೆಯನ್ನಾಗಿ ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. ಒಂದು ಛಾಯಾಚಿತ್ರ ಸಾವಿರ ಪದಗಳಿಗೆ ಸಮ ಎಂಬ ಮಾತಿನಂತೆ, ಛಾಯಾಗ್ರಹಣ ಕಲೆಯು, ಜಗತ್ತಿನ ಘಟನೆಗಳನ್ನು ದಾಖಲಿಸುವ ಬಹುಮುಖ್ಯ ಸಲಕರಣೆಯಾಗಿದೆ.

ವಿಶ್ವ ಛಾಯಾಗ್ರಹಣದ ದಿನವಾದ ಇಂದು ನಮ್ಮ ಮೈಸೂರು ಆನ್ಲೈನ್ ಇನ್‌ಸ್ಟಾಗ್ರಾಮ್ ಪುಟದಲ್ಲಿ ಈ ವರ್ಷ ವೈರಲ್ ಆದ ಪ್ರಮುಖ ಫೋಟೋಗಳು ಹೀಗಿವೆ.

  1. ಮೈಸೂರು ರಾಜ ವಂಶಸ್ಥ ಮಹಾರಾಜ ಯದುವೀರ್ ಒಡೆಯರ್ ಅವರ ಪುತ್ರ ಆದ್ಯವೀರ್‌ ಒಡೆಯರ್ ತನ್ನ ಅಜ್ಜಿ ಪ್ರಮೋದಾದೇವಿ ಒಡೆಯರ್ ಅವರೊಂದಿಗೆ ಇರುವ ಈ ಫೋಟೋ ‍ಛಾಯಾಗ್ರಾಹಕ ಶ್ರೇಯಸ್ ದೇವನೂರು ಅವರು ತೆಗೆದಿದ್ದಾರೆ. 1 ಲಕ್ಷಕ್ಕೂ ಅಧಿಕ ಜನರನ್ನ ತಲುಪಿರುವ ಈ ಫೋಟೋವನ್ನ 12 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.

2. ತಾಯಿ ಚಾಮುಂಡೇಶ್ವರಿಯನ್ನು ಚಿನ್ನದ ಅಂಬಾರಿಯಲ್ಲಿ ನೋಡುವುದೆ ಒಂದು ಚೆಂದ. ಈ ಫೋಟೋವನ್ನ ‍ಛಾಯಾಗ್ರಾಹಕ ಶ್ರೀನಿಧಿ ಮುರುಳಿಧರ್ ತೆಗೆದಿದ್ದಾರೆ. 91 ಸಾವಿರಕ್ಕೂ ಅಧಿಕ ಜನರನ್ನ ತಲುಪಿರುವ ಈ ಚಿತ್ರವನ್ನ 17 ಸಾವಿರ ಮಂದಿ ಲೈಕ್ ಮಾಡಿದ್ದಾರೆ.

3. ಒಂದು ಮಗು ಕಾಲಿಗೆ ಚಕ್ರಕಟ್ಟಿ ಸ್ಕೇಟಿಂಗ್ ಆಡುತ್ತಿದ್ದರೆ.. ಇನ್ನೊಂದು ಮಗು ಜೀವನಚಕ್ರ ಸರಿದೂಗಿಸಲು ಬೀದಿ ವ್ಯಾಪಾರ ನಡೆಸುತ್ತಿದೆ. ಈ ಮನ ಮಿಡಿವ ಚಿತ್ರವನ್ನ ‍ಛಾಯಾಗ್ರಾಹಕ ರವಿ ಎಂಬುವವರು ತೆಗೆದಿದ್ದಾರೆ. 59 ಸಾವಿರಕ್ಕೂ ಅಧಿಕ ಜನರನ್ನ ತಲುಪಿರುವ ಈ ಚಿತ್ರವನ್ನ 7 ಸಾವಿರ ಮಂದಿ ಲೈಕ್ ಮಾಡಿದ್ದಾರೆ.

4. ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್’ನ ವೈಮಾನಿಕ ದೃಶ್ಯವಿದು. ‍ಛಾಯಾಗ್ರಾಹಕ ಬೀಮಾ ದಾಸ್ ತೆಗೆದಿರುವ ಈ ಚಿತ್ರ 58 ಸಾವಿರಕ್ಕೂ ಅಧಿಕ ಜನರನ್ನ ತಲುಪಿದ್ದು 6 ಸಾವಿರ ಮಂದಿ ಲೈಕ್ ಮಾಡಿದ್ದಾರೆ.

5. ಮಣಿ ರಿವಾನ್ ತೆಗೆದಿರುವ ಮೈಸೂರಿನ ಶಕ್ತಿ ಕೇಂದ್ರ ನಾಡ ದೇವತೆ ಶ್ರೀ ಚಾಮುಂಡೇಶ್ವರಿ ದೇವಾಲಯದ ಚಿತ್ರವಿದು. 40 ಸಾವಿರಕ್ಕೂ ಅಧಿಕ ಜನರನ್ನ ತಲುಪಿದ್ದು 6 ಸಾವಿರ ಮಂದಿ ಲೈಕ್ ಮಾಡಿದ್ದಾರೆ.

Scroll to Top