ಮೈಸೂರು: ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮುಚ್ಚಲಾಗಿದ್ದ ವಿಶ್ವವಿಖ್ಯಾತ ಮೈಸೂರು ಅರಮನೆ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.
ಜೂನ್. 8ರ ಸೋಮವಾರ ಬೆಳಗ್ಗೆ 10 ಗಂಟೆಯಿಂದ ಅರಮನೆಗೆ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ನೀಡಲಾಗಿದ್ದು ಸಾಮಾಜಿಕ ಅಂತರ, ಮಾಸ್ಕ್ ಧರಿಸೋದು ಕಡ್ಡಾಯವಾಗಿದೆ. 10 ವರ್ಷದೋಳಗಿನ ಮಕ್ಕಳು ಹಾಗೂ 65 ವರ್ಷದ ವೃದ್ದರಿಗೆ ಅರಮನೆ ಪ್ರವೇಶ ಇಲ್ಲ.
ಇನ್ನು ಈ ಬಗ್ಗೆ ಅರಮನೆ ಮಂಡಳಿ ಉಪನಿರ್ದೇಶಕರು ಸುಬ್ರಹ್ಮಣ್ಯ ಅವರು ಪ್ರವಾಸಿಗರು ಲಗೆಜ್‌ಗಳನ್ನು ವಾಹನಲ್ಲಿಟ್ಟು ಬರಬೇಕು. ಒಂದು ವೇಳೆ ತಂದಲ್ಲಿ ಡಿಸ್ ಇನ್ಫೆಕ್ಟೆಂಟ್ ಸ್ಪ್ರೇ ಮಾಡಿ ಅರಮನೆಗೆ ಪ್ರವೇಶ ಕಲ್ಪಿಸಲಾಗುವುದು. ಗಂಟೆಗೆ 350 ಮಂದಿ ಅರಮನೆ ವಿಕ್ಷಣೆಗೆ ಅವಕಾಶ. ಪ್ರವಾಸಿಗರೇ ನೀರಿನ ಬಾಟೆಲ್ ತರಬೇಕು. 6 ಅಡಿ ಅಂತರದಲ್ಲಿ ಅರಮನೆ ನೋಡಲು ಅವಕಾಶ.
ಕೇಂದ್ರದ ಮಾರ್ಗಸೂಚಿ ಪಾಲನೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಮಾಹಿತಿ ನಿಡಿದ್ದಾರೆ.