ದೇಶದಲ್ಲೇ ಮೊದಲು: ಮೈಸೂರಲ್ಲಿ ತಯಾರಾದ ಹೈಸ್ಪೀಡ್ ರೈಲು ಚಕ್ರ

ಮೈಸೂರು: ನೈಋತ್ಯ ರೈಲ್ವೆಯ ಮೈಸೂರಿನ ವ್ಹೀಲ್ ಶಾಪ್(ರೈಲ್ವೆ ಕಾರ್ಯಾಗಾರ) ದೇಶದಲ್ಲೇ ಮೊದಲ ಬಾರಿಗೆ ಹೈಸ್ಪೀಡ್ ಮೆಮು ಮೋಟಾರ್ ಕೋಚ್ ವ್ಹೀಲ್‌ ಅನ್ನು ಯಶಸ್ವಿಯಾಗಿ ತಯಾರಿಸಿದೆ. ಹೀಗಾಗಿ ಈ ಕಾರ್ಯ ಯಶಸ್ವಿಗೊಳಿಸಿದ ಮೊದಲ ಭಾರತೀಯ ರೈಲ್ವೆ ವಿಭಾಗ ಎಂಬ ಕೀರ್ತಿಗೆ ಪಾತ್ರವಾಗಿದೆ.‌

ಗಂಟೆಗೆ 160 ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿರುವ ಮೆಮು ರೈಲಿಗೆ ಮೂರು ಫೇಸ್‌ನ ಈ ಕೋಚ್ ವ್ಹೀಲ್ ಸೆಟ್ ಬಳಕೆಯಾಗಲಿದೆ. ಮೊದಲ ಹಂತದಲ್ಲಿ 6 ವ್ಹೀಲ್ ಸೆಟ್‌ಗಳನ್ನು ಬಿಇಎಂಎಲ್‌ಗೆ ರವಾನಿಸಲು ಸಿದ್ಧವಾಗಿದೆ. ಇವುಗಳ ವೆಚ್ಚ 2.4 ಕೋಟಿ ರೂ.ಗಳು. ಉತ್ಪಾದನೆಗೆ ಬೇಕಾದ ಕಚ್ಚಾ ವಸ್ತುಗಳನ್ನು ಬೆಮೆಲ್ ಸಂಸ್ಥೆಯ ತನ್ನ ಖರ್ಚಿನಿನಲ್ಲೇ ಪೂರೈಕೆ ಮಾಡಲಾಗಿದ್ದು, ಈ ವಸ್ತುಗಳನ್ನು ಬಳಸಿ ಮೈಸೂರು ರೈಲ್ವೆ ಮೆಮು ಮೋಟಾರ್ ಕೋಚ್ ವ್ಹೀಲ್ ಸೆಟ್‌ಗಳನ್ನು ತಯಾರಿಸಿದೆ.

ಗಾಜಿಯಾಬಾದ್ ಮತ್ತು ದೆಹಲಿ ನಡುವೆ ಸಂಚಾರ ನಡೆಸುವ ರೈಲುಗಳಿಗಾಗಿ ಈ ವ್ಹೀಲ್‌ಗಳನ್ನು ಬಳಕೆ ಮಾಡಲಾಗುತ್ತದೆ. ಬಿಇಎಂಎಲ್ ಈ ಗಾಲಿಗಳಿಗೆ ಅನುಗುಣವಾಗಿ ರೈಲು ಬೋಗಿಯನ್ನು ತಯಾರು ಮಾಡುತ್ತಿದೆ.

ಬಿಇಎಂಎಲ್ 225 ಟೈಲರ್ ಕೋಚ್‌ ಕಾರುಗಳಿಗೆ 900 ಟೈಲರ್ ಕೋಚ್ ವ್ಹೀಲ್ ಸೆಟ್‌ಗಳನ್ನು ಮತ್ತು 75 ಮೋಟಾರ್ ಕೋಚ್ ಕಾರುಗಳಿಗೆ 300 ಮೋಟಾರ್ ಕೋಚ್, ವ್ಹೀಲ್ ಸೆಟ್‌ಗಳನ್ನು ತಯಾರು ಮಾಡಲು ಮೈಸೂರು ಕಾರ್ಯಾಗಾರದ ಬಳಿ ಬೇಡಿಕೆ ಸಲ್ಲಿಸಿತ್ತು.

Leave a Comment

Scroll to Top