ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿಗೆ ಮತ್ತೆ ಸ್ವಚ್ಛ ನಗರಿಯ ಗೌರವ ಲಭ್ಯವಾಗಿದೆ.
2020ರ ಸ್ವಚ್ಚ ಸರ್ವೇಕ್ಷಣಾ ಅಭಿಯಾನದಡಿ ಇಂದು ಸ್ವಚ್ಛ ನಗರಗಳ ಫಲಿತಾಂಶ ಪ್ರಕಟವಾಗಿದ್ದು 3 ರಿಂದ 10 ಲಕ್ಷ ಜನಸಂಖ್ಯೆಯುಳ್ಳ ನಗರಗಳ ವಿಭಾಗದಲ್ಲಿ ಮೈಸೂರು ಮೊದಲ ಸ್ಥಾನ ಪಡೆದಿದೆ. ಇನ್ನು ಸಮಗ್ರ ವಿಭಾಗದಲ್ಲಿ ಐದನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ.
ಸ್ವಚ್ಛ ಸರ್ವೇಕ್ಷಣೆಗೆ ಸಂಬಂಧಿಸಿದಂತೆ ಕೇಂದ್ರ ನಗರಾಭಿವೃದ್ಧಿ ಸಚಿವಾಲಯದಿಂದ ಇದೇ ಜನವರಿ ತಿಂಗಳಿನಲ್ಲಿ ಮೈಸೂರು ಸುತ್ತಮುತ್ತ ಸರ್ವೇಕ್ಷಣಾ ಸರ್ವೇ ನಡೆಸಲಾಗಿತ್ತು. ಈ ಸ್ಫರ್ಧೆಯಲ್ಲಿ 4400ಕ್ಕೂ ಹೆಚ್ಚು ನಗರಗಳು ಭಾಗವಹಿಸಿದ್ದವು.