
ಮೈಸೂರು: ಪುಣೆಯ ಸೇರಂ ಇನ್ಸ್ಟಿಟ್ಯೂಟ್ ತಯಾರಿಸಿರುವ ಕೊರೊನಾ ಲಸಿಕೆ ಕೋವಿಶೀಲ್ಡ್ ತಡರಾತ್ರಿ ಮೈಸೂರಿಗೆ ತಲುಪಿದೆ.
ಮೈಸೂರಿಗೆ ಆಗಮಿಸಿದ ಲಸಿಕೆಯನ್ನ ಡಾ. ರವಿ, ಡಾ ಶಿವಶಂಕರ್, ಫಾರ್ಮಸಿಯ ಅಶೋಕ್ ಹಾಗೂ ರಾಜೇಂದ್ರ ವೈದ್ಯರ ತಂಡ ಸ್ವೀಕರಿಸಿದೆ.

ಜನವರಿ 16 ರಿಂದ ಕೋವಿಡ್ ಲಸಿಕೆ ನೀಡುವ ಕಾರ್ಯ ಆರಂಭವಾಗಲಿದ್ದು ಒಟ್ಟು 47 ಸಾವಿರ ಡೋಸ್ ಮೈಸೂರಿಗೆ ಬಂದಿದೆ. ಇದರಲ್ಲಿ ಮೈಸೂರು ಜಿಲ್ಲೆಗೆ 20,500 ಡೋಸ್, ಚಾಮರಾಜನಗರ 4 ಸಾವಿರ, ಕೊಡಗು 4 ಸಾವಿರ ಡೋಸ್, ಹಾಸನಕ್ಕೆ 10500, ಮಂಡ್ಯಕ್ಕೆ 8000 ಡೋಸ್ ನೀಡಲಾಗುತ್ತದೆ.
ಸದ್ಯ ಅಧಿಕಾರಿಗಳು ಸುರಕ್ಷಿತವಾಗಿ ಲಸಿಕೆಯನ್ನು ಕೋಲ್ಡ್ ಸ್ಟೋರೆಜ್‌ನಲ್ಲಿ ಇರಿಸಿದ್ದಾರೆ.
You must be logged in to post a comment.