ಮೈಸೂರಿನಲ್ಲಿ ಮಹಾಮಾರಿ ಕೊರೋನಾಗೆ ಮೊದಲ ಬಲಿ: ಇಂದು 22 ಪಾಸಿಟಿವ್ ಕೇಸ್ ಪತ್ತೆ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮೊದಲ ಕೊರೊನಾ ಸಾವಿನ ಪ್ರಕರಣ ವರದಿಯಾಗಿದೆ.

ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಕೆ.ಆರ್ ನಗರದ 87 ವರ್ಷದ ವ್ಯಕ್ತಿಗೆ(ಬೆಂಗಳೂರಿನಿಂದ ಮೈಸೂರಿಗೆ ಹಿಂದಿರುಗಿದ್ದರು) ಕೋವಿಡ್ – 19 ಸೋಂಕು ಇರುವುದು ಇಂದು ಬಂದ ಹೆಲ್ತ್ ಬುಲೆಟಿನ್’ನಿಂದ ಖಚಿತವಾಗಿದೆ. ಮೈಸೂರಿನಲ್ಲಿ ಐಸಿಎಂಆರ್ ಪ್ರೋಟೋಕಾಲ್ಗಳ ಪ್ರಕಾರ ಅವರನ್ನು ಸಮಾಧಿ ಮಾಡಲಾಗಿದೆ. ಕೋವಿಡ್ -19 ರ ಕಾರಣದಿಂದಾಗಿ ಮೈಸೂರಿನಲ್ಲಿ ಇದು ಮೊದಲ ಸಾವಿನ ಪ್ರಕರಣವಾಗಿದೆ. ಈ ಮೊದಲು ಸೋಂಕಿನಿಂದ ಗುಣಮುಖರಾದ ವ್ಯಕ್ತಿಯೊಬ್ಬ ಮೇ ತಿಂಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಸಾವನ್ನಪ್ಪಿದ್ದ.

ಮೃತಪಟ್ಟ ವೃದ್ಧನನ್ನು 3 ದಿನಗಳ ಹಿಂದೆ ಉಸಿರಾಟದ ಸಮಸ್ಯೆಯಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಂಗಳವಾರ ನಿಧನರಾಗಿದ್ದರು. ಅಧಿಕಾರಿಗಳು ಗಂಟಲಿನ ಸ್ವ್ಯಾಬ್ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದರು. ಇದೀಗ ವರದಿಯಲ್ಲಿ ಕೊರೋನಾ ಇರುವುದು ದೃಢಪಟ್ಟಿದೆ. ಇನ್ನು ಅಧಿಕಾರಿಗಳು ವೈರಸ್ ಹರಡುವುದನ್ನು ತಡೆಗಟ್ಟಲು ಅವರ ಪ್ರಯಾಣದ ಇತಿಹಾಸ ಮತ್ತು ಸಂಪರ್ಕಗಳನ್ನು ಪತ್ತೆಹಚ್ಚುತ್ತಿದ್ದಾರೆ.

ಇಂದು 22 ಕೊರೊನಾ ಪಾಸಿಟಿವ್

ಇನ್ನು ಜಿಲ್ಲೆಯಲ್ಲಿ ಇಂದು 22 ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 220ಕ್ಕೆ ಏರಿಕೆ ಆಗಿದೆ.

ಇಂದು ಸಂಜೆ ಬಂದ ಹೆಲ್ತ್ ಬುಲೆಟಿನ್ ಪ್ರಕಾರ ಬೆಂಗಳೂರಿನಿಂದ ಮೈಸೂರಿಗೆ ಹಿಂದಿರುಗಿದ್ದ 6 ಮಂದಿ, ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ 7 ಜನರಿಗೆ, ಅಸ್ಸಾಂ ನಿಂದ ಬಂದಿದ್ದ ಇಬ್ಬರು, ಚಾಮರಾಜನಗರ ಮತ್ತು ರಾಮನಗರದಿಂದ ಆಗಮಿಸಿದ್ದ ತಲಾ ಒಬ್ಬರು ಹಾಗೂ 5 ಜನರ ಸಂಪರ್ಕದ ಮಾಹಿತಿ ಕಲೆಹಾಕಲಾಗುತ್ತಿದೆ. ಸದ್ಯ ಇವರನ್ನು ನಗರದ ಕೋವಿಡ್ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

7 Primary contacts of positive patients.

6 Inter-district travel of Bengaluru

5 Contact under tracing

2 Assam returnees

1 Inter-district travel of Chamarajanagar

1 Inter-district travel of Ramanagara

ಇನ್ನು ಸೋಂಕಿನಿಂದ ಸಂಪೂರ್ಣ ಗುಣಮುಕರಾದ ಹಿನ್ನಲೆ ಇಂದು 5 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಒಟ್ಟಾರೆ ಜಿಲ್ಲೆಯಲ್ಲಿ ಒಟ್ಟು 220ಕ್ಕೆ ಜನರಿಗೆ ಸೋಂಕು ತಗುಲಿದೆ. ಇದರಲ್ಲಿ 127 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸೋಂಕಿನಿಂದ ಓರ್ವ ಮೃತಪಟ್ಟಿದ್ದು, 92 ಆ್ಯಕ್ಟೀವ್ ಪ್ರಕರಣಗಳು ಇವೆ.

Scroll to Top