ಮೈಸೂರು ದಸರಾ: ಇಂದಿನಿಂದ 10 ದಿನ ‘ಯುವ ಸಂಭ್ರಮ’

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರ-2019 ಮಹೋತ್ಸವದ ಅಂಗವಾಗಿ ಆಯೋಜಿಸಿರುವ ‘ ಯುವ ಸಂಭ್ರಮ ‘ ಕಾರ್ಯಕ್ರಮಕ್ಕೆ ಇಂದು ಚಾಲನೆ ಸಿಗಲಿದೆ.

ಇಂದಿನಿಂದ ಸೆಪ್ಟೆಂಬರ್ 26ರ ವರೆಗೂ ಈ ಕಾರ್ಯಕ್ರಮ ನಡೆಯಲಿದೆ. ನಗರದ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ 10 ದಿನಗಳ ಕಾಲ ಯುವಸಂಭ್ರಮ ಕಾರ್ಯಕ್ರಮ ನಡೆಯಲಿದ್ದು, ಇಂದು ಸಂಜೆ 5:30ಕ್ಕೆ ಕಾರ್ಯಕ್ರಮದ ಉದ್ಘಾಟನೆಯನ್ನು ಚಿತ್ರನಟ ಗೋಲ್ಡನ್ ಸ್ಟಾರ್ ಗಣೇಶ್ ನೆರವೇರಿಸುವರು.

ಇದೇ ಮೊದಲ ಬಾರಿಗೆ ಹೆಚ್ಚು ಕಾಲೇಜುಗಳಿಗೆ ಭಾಗವಹಿಸಲು ಯುವಸಂಭ್ರಮ ಉಪ ಸಮಿತಿ ಅವಕಾಶ ನೀಡಿದ್ದು, ಈ ವರ್ಷ 260 ಕಾಲೇಜುಗಳ ವಿದ್ಯಾರ್ಥಿಗಳು ಭಾಗಿಯಾಗುತ್ತಿದ್ದಾರೆ. ಕಳೆದ ಬಾರಿ 8 ದಿನಗಳು ನಡೆದಿದ್ದ ಕಾರ್ಯಕ್ರಮ ಈ ವರ್ಷ 10 ಕಾಲ ನಡೆಯಲಿದೆ.

ದಸರಾ ಮಹೋತ್ಸವದ ಮೊಟ್ಟ ಮೊದಲ ಕಾರ್ಯಕ್ರಮ ಈ ಯುವ ಸಂಭ್ರಮದಲ್ಲಿ ಈವರೆಗೆ ಹಾಡು-ನೃತ್ಯದ ಕಾರಂಜಿ ಮೂಡು ತ್ತಿತ್ತು. ಆದರೆ ಈ ಬಾರಿ ಮೈಮ್ (ಅಣಕು ನಾಟಕ), ಸ್ಕಿಟ್ (ಲಘು ಹಾಸ್ಯ ನಾಟಕ) ಹಾಗೂ ಲಘು ನಾಟಕ ಪ್ರದರ್ಶನಕ್ಕೂ ಅವಕಾಶ ನೀಡಲಾಗಿದೆ.

Scroll to Top