ಕಂಕಣ ಸೂರ್ಯಗ್ರಹಣ: ಬಾನಂಗಳದಲ್ಲಿ ನಡೆದ ಅಪರೂಪದ ವಿದ್ಯಮಾನವನ್ನು ಕಣ್ತುಂಬಿಕೊಂಡ ಸಾವಿರಾರು ವಿದ್ಯಾರ್ಥಿಗಳು

ಮೈಸೂರು: ಸೌರಮಂಡಲದ ಅತ್ಯಂತ ಅಪರೂಪದ ಕಂಕಣ ಸೂರ್ಯಗ್ರಹಣ ಇಂದು ವಿಶ್ವದ ವಿವಿಧೆಡೆ ಘಟಿಸಿದ್ದು, ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಈ ವಿಸ್ಮಯವನ್ನು ಲಕ್ಷಾಂತರ ಮಂದಿ ವೀಕ್ಷಿಸಿ ಚಕಿತಗೊಂಡರು. ಬೆಳಗ್ಗೆ 8.04ಕ್ಕೆ ಆರಂಭವಾದ ಸೂರ್ಯಗ್ರಹಣ ಬೆಳಿಗ್ಗೆ 11:11ಕ್ಕೆ ಅಂತ್ಯಗೊಂಡಿತು.

ಮೈಸೂರಿನ ಮೈಸೂರು ಸೈನ್ಸ್‌ ಫೌಂಡೇಷನ್‌, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಮೈಸೂರು ವಿಶ್ವ ವಿದ್ಯಾಲಯ ಸಹಯೋಗದಲ್ಲಿ ಇಂದು ಬೆಳಗ್ಗೆ 8ರಿಂದ 11.05ರವರೆಗೆ ಕ್ರಾಫರ್ಡ್‌ ಹಾಲ್‌ ಎದುರಿನ ವಿಶ್ವ ವಿದ್ಯಾಲಯದ ಓವೆಲ್‌ ಮೈದಾನದಲ್ಲಿ’ವಿಜ್ಞಾನ ಕೌತುಕ ವೀಕ್ಷಣೆಯ ಹಬ್ಬ’ ಆಯೋಜಿಸಿತ್ತು. ಎರಡು ಸಾವಿರ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ಕಂಕಣ ಸೂರ್ಯಗ್ರಹಣ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಸೌರ ಕನ್ನಡಕ ಮೂಲಕ ಸುರಕ್ಷಿತವಾಗಿ ಗ್ರಹಣ ವೀಕ್ಷಿಸಿ ವಿಜ್ಞಾನ ಕೌತುಕವನ್ನು ಕಣ್ತುಂಬಿಕೊಳ್ಳುವ ಅವಕಾಶ ಕಲ್ಪಿಸಿ ಸೌರ ಕನ್ನಡ ವಿತರಿಸಲಾಗಿತ್ತು.

2019ರ ಮೂರನೇ ಮತ್ತು ಕೊನೆಯ ಸೂರ್ಯಗ್ರಹಣ ಇದಾಗಿದ್ದು, ಸೂರ್ಯ –ಚಂದ್ರ ಮತ್ತು ಭೂಮಿ ಒಂದೇ ಸರಳ ರೇಖೆಯಲ್ಲಿ ಬಂದಾಗ ಈ ಸೂರ್ಯಗ್ರಹಣ ಸಂಭವಿಸುತ್ತದೆ. ಈ ಸಲದ ಸೂರ್ಯಗ್ರಹಣದಲ್ಲಿ ಚಂದ್ರ, ಶೇ 90 ರಷ್ಟು ಮಾತ್ರ ಸೂರ್ಯನನ್ನು ಆವರಿಸಿಕೊಂಡಿದೆ ಎಂದು ಮಕ್ಕಳಿಗೆ ವಿವರಿಸಲಾಗಿತ್ತು. ಬೆಳಿಗ್ಗೆ 8ಗಂಟೆಯಿಂದ ಹತ್ತುಗಂಟೆಯವರೆಗೂ ಮೋಡ ಕವಿದ ವಾತಾವರಣವಿದ್ದು, ತಕ್ಕಮಟ್ಟಿಗೆ ಕತ್ತಲು ಆವರಿಸಿತ್ತು. ಇದರಿಂದ ಸೂರ್ಯಗ್ರಹಣ ವೀಕ್ಷಣೆಗೆ ಕೊಂಚ ಅಡಚಣೆ ಉಂಟಾಯಿತು.

Scroll to Top