ಕುಂಭಮೇಳಕ್ಕೆ ಬರುವವರು ಇನ್ನೂ ಹಲವು ಪ್ರವಾಸಿ ತಾಣ ವೀಕ್ಷಿಸಬಹುದು

ಮೈಸೂರು: ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ತಿರುಮಕೂಡಲು ಶ್ರೀ ಕ್ಷೇತ್ರದಲ್ಲಿ ಫೆಬ್ರವರಿ 17 ರಿಂದ 19 ರವರಗೆ ನಡೆಯುವ 11 ಕುಂಭಮೇಳಕ್ಕೆ ಆಗಮಿಸುವ ಲಕ್ಷಾಂತರ ಭಕ್ತಾಧಿಗಳು ಅಲ್ಲಿಂದ ವಿವಿಧ ಧಾರ್ಮಿಕ ಕ್ಷೇತ್ರ ಮತ್ತು ಪ್ರವಾಸಿ ಸ್ಥಳಗಳಿಗೂ ಸಹ ಭೇಟಿ ನೀಡಬಹುದು.

ತಿ.ನರಸೀಪುರದಿಂದ 12 ಕಿ.ಮೀ. ದೂರದಲ್ಲಿರುವ ಮುಡುಕುತೊರೆ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನ, ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ದೇವಸ್ಥಾನ, ಮೈಸೂರಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನ, ಹನೂರು ತಾಲ್ಲೂಕಿನ ಶ್ರೀಮಲೈಮಹದೇಶ್ವರ ಮತ್ತು ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನಗಳಿಗೂ ತೆರಳಬಹುದು.

ಪ್ರವಾಸಿ ತಾಣಗಳಾದ ತಲಕಾಡು, ಸೋಮನಾಥಪುರ, ಗಗನಚುಕ್ಕಿ, ಬರಚುಕ್ಕಿ, ಶಿವನಸಮುದ್ರ, ಐತಿಹಾಸಿಕ ಪ್ರಸಿದ್ಧ ಶ್ರೀರಂಗಪಟ್ಟಣ, ಮೈಸೂರು ಅರಮನೆ, ಮೃಗಾಲಯ, ಕಾರಂಜಿಕೆರೆ, ಕೃಷ್ಣರಾಜ ಜಲಾಶಯ, ರಂಗನತಿಟ್ಟು ಪಕ್ಷಿಧಾಮ ಇನ್ನೂ ಹತ್ತು ಹಲವು ಕಡೆ ಪ್ರವಾಸ ಮಾಡಿದರೆ ಮನಸ್ಸಿಗೆ ಮುದ ದೊರೆಯತ್ತದೆ.

ಕುಂಭಮೇಳದಲ್ಲಿ ಪಾಲ್ಗೊಂಡ ನಂತರ ಭಕ್ತಾಧಿಗಳು ಧಾರ್ಮಿಕ ಕ್ಷೇತ್ರ ಮತ್ತು ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವುದರಿಂದ ಮುಂದಿನ ದಿನಗಳಲ್ಲಿ ತಮ್ಮ ನೆನಪಿನಲ್ಲಿ ಉಳಿಯುತ್ತದೆ. ಈ ರೀತಿಯ ಕುಂಭಮೇಳ ಮತ್ತೇ ಬಂದಾಗ ತಾವು ಪ್ರವಾಸ ಮಾಡಿದ ತಾಣಗಳ ಬಗ್ಗೆ ತಮ್ಮ ಕುಟುಂಬ ಸದಸ್ಯರೊಂದಿಗೆ ನೆರಹೊರೆಯವರೊಂದಿಗೆ ಸವಿನೆನಪು ಹಂಚಿಕೊಳ್ಳಬಹುದು.

ಕುಂಭಮೇಳದಲ್ಲಿ ಭಾಗವಹಿಸಿದ ಭಕ್ತರು ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿನೀಡಿದ ದೃಶ್ಯಗಳನ್ನು ಕಣ್ತುಂಬಿಕೊಂಡು ತಮ್ಮ ಮನದಾಳದಲ್ಲಿದ್ದ ಆಪ್ರದೇಶಗಳ ಕಲ್ಪನೆಯನ್ನು ಪ್ರತ್ಯಕ್ಷವಾಗಿ ಕಂಡು ಪುಳಕಿತರಾಗಬಹುದು. ಸ್ಥಳಗಳ ಮಹತ್ವ ಮತ್ತು ವೈಶಿಷ್ಟ್ಯತೆ ಹಾಗೂ ಅವುಗಳ ಇತಿಹಾಸವನ್ನು ತಿಳಿಯಬಹುದು.

1 thought on “ಕುಂಭಮೇಳಕ್ಕೆ ಬರುವವರು ಇನ್ನೂ ಹಲವು ಪ್ರವಾಸಿ ತಾಣ ವೀಕ್ಷಿಸಬಹುದು”

Leave a Comment

Scroll to Top