
ಮೈಸೂರು: ಕೊರೋನಾ ದಿನೇ ದಿನೇ ಹೆಚ್ಚಾಗುತ್ತಿದ್ದು ನಿಮ್ಮ ಸೇಫ್ಟೀಯಲ್ಲಿ ನೀವೀರಿ ಅಂತ ಪೋಲಿಸ್ ಇಲಾಖೆ 144 ಸೆಕ್ಸನ್ ಜಾರಿ ಮಾಡಿದ್ರೂ ಸಹ ಜನರು ಮಾತ್ರ ಅನವಶ್ಯಕವಾಗಿ ಓಡಾಡುವುದನ್ನ ಮಾತ್ರ ಬಿಟ್ಟಿಲ್ಲ.ಏ 3 ರಂದು ಅನವಶ್ಯಕವಾಗಿ ಓಡಾಡಿದ 388 ವಾಹನ ಸೀಜ್ ಮಾಡಿದ್ದಾರೆ.
ಎನ್.ಆರ್, ಮಂಡಿ, ವಿವಿ.ಪುರಂ, ಮೇಟಗಳ್ಳಿ, ವಿಜಯನಗರ, ಹೆಬ್ಬಾಳ್, ದೇವರಾಜ, ಲಷ್ಕರ್, ನಜರ್ ಬಾದ್, ಉದಯಗಿರಿ, ಆಲನಹಳ್ಳಿ, ಕೆ.ಆರ್, ಲಕ್ಷ್ಮೀಪುರಂ, ಅಶೋಕ ಪುರಂ, ವಿದ್ಯಾರಣ್ಯಪುರಂ, ಸರಸ್ವತಿಪುರಂ, ಕುವೆಂಪು ನಗರ ವ್ಯಪ್ತಿಯಲ್ಲಿ ಪೊಲೀಸರು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
- ದ್ವಿಚಕ್ರ ವಾಹನ-352
- ತ್ರಿಚಕ್ರ ವಾಹನ-10
- ನಾಲ್ಕು ಚಕ್ರವಾಹನ-26
- ಒಟ್ಟು 388 ವಾಹನಗಳ ಸೀಜ್ ಮಾಡಲಾಗಿದೆ.
ತುರ್ತು ಸಂದರ್ಭದಲ್ಲಿ ಹೊರತುಪಡಿಸಿ ಸಾರ್ವಜನಿಕರು ಹೊರಬರದಂತೆ, ವಾಹನ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಜನರೇ ಮನೆಯಲ್ಲಿದ್ದು ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ ಅಂತ ಎಷ್ಟೇ ಹೇಳಿದ್ರು ಅವರು ಮಾತ್ರ ನಾವು ಹೆಂಗಾದ್ರು ಹೇಳಿಕೊಳ್ಳಿ ನಾವು ರಸ್ತೆಯಲ್ಲಿ ಓಡಾಡ್ತೀನಿ ಎಂದು ನಿಯಮ ಉಲ್ಲಂಘಿಸಿದ 388 ವಾಹನವನ್ನ ಸೀಜ್ ಮಾಡಿ ಕಠಿಣ ಕ್ರಮ ಕೈಗೊಂಡು ಮೈಸೂರು ಪೋಲಿಸರು ಬುದ್ದಿ ಕಲಿಸಿದ್ದಾರೆ ಎಂದು ಡಿಸಿಪಿ ಪ್ರಕಾಶ್ ಗೌಡ ಮಾಹಿತಿ ನೀಡಿದ್ದಾರೆ.

You must be logged in to post a comment.