ಮೈಸೂರು: ಒಬ್ಬ ಸಾಮಾನ್ಯ ರೈತನ ಮಗ ಏನೆಲ್ಲ ಮಾಡಬಹುದು ಅನ್ನೋದಕ್ಕೆ ಮೈಸೂರಿನ ನಾಗೇಶ್ ಸಾಕ್ಷಿಯಾಗಿದ್ದು, ಇವತ್ತು ಮಾಡೆಲಿಂಗ್ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದಾನೆ. ಮಾತ್ರವಲ್ಲ ‘ಮಂಜರಿ ನೇಪಾಳ ಪ್ರೈವೆಟ್ ಲಿಮಿಟೆಡ್ ಆಯೋಜಿಸಿದ್ದ ಮಿಸ್ಟರ್ ಏಷ್ಯಾ 2020ರಲ್ಲಿ ಮೂರು ವಿಭಾಗದಲ್ಲಿ ನಾಗೇಶ್ ವಿಜೇತರಾಗಿದ್ದಾರೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇವನೂರು ಗ್ರಾಮದ ರೈತರ ಮಗನಾದ ಇಂಟರ್ ನ್ಯಾಷನಲ್ ಮಾಡೆಲ್ ನಾಗೇಶ್ ಡಿ.ಸಿ.ಅವರು ಮಂಜರಿ ನೇಪಾಳ್ ಪ್ರೈ.ಲಿಮಿಟೆಡ್ ನವರು ಆಯೋಜಿಸಿದ್ದ ಮಿಸ್ಟರ್ ಏಷ್ಯಾ 2020ರಲ್ಲಿ ಮಿಸ್ಟರ್ ಏಷ್ಯಾ ಅಡ್ವಂಚರ್ 2020, ಮುರ್ ಏಷ್ಯಾ ಕಲ್ಚರ್ 2020 ಮತ್ತು ಮಿ.ಏಷ್ಯಾ ಸೌತ್ ಇಂಡಿಯಾದಲ್ಲಿ ವಿಜೇತರಾಗಿದ್ದಾರೆ.
ಚಿಟವಾನ್‌ನ ಸೆವನ್ ಸ್ಟಾರ್ ಹೋಟೆಲ್‌ನಲ್ಲಿ 8ದಿನಗಳ ಕಾಲ ನಡೆದ ಫ್ಯಾಷನ್ ಶೋ ನಡೆದಿತ್ತು. ಈ ವೇಳೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇವನೂರು ಗ್ರಾಮದ ರೈತಾಪಿ ವರ್ಗದ ಚಿನ್ನಬುದ್ದಿ ಹಾಗೂ ರೇಣುಕ ಅವರ ದಂಪತಿಯ ಪುತ್ರನಾದ ನಾಗೇಶ್ ದೇಶದ ಕೀರ್ತಿ ಪತಾಕೆ ಹಾರಿಸಿದ್ದಾರೆ. ರೈತರ ಬಟ್ಟೆ ತೊಟ್ಟು ಫ್ಯಾಷನ್ ಶೋನಲ್ಲಿ ಭಾಗಿಯಾದ ನಾಗೇಶ್, ಮೂರು ವಿಭಾಗದಲ್ಲಿ ಪ್ರಶಸ್ತಿಗಳಿಸಿದ್ದಾರೆ. ವಿಶೇಷ ಅಂದ್ರೆ ಆ ಫ್ಯಾಷನ್ ಶೋನಲ್ಲಿ ಕನ್ನಡದಲ್ಲೇ ಮಾತಾಡಿ ನಾಡಿನ ಹಾಗೂ ಕನ್ನಡದ ಪ್ರೇಮ ಮೆರೆದಿದ್ದಾರೆ. ಇದು ಜಡ್ಜ್‌ಗಳಿಗೆ ಆಕರ್ಷಿಸಿದ್ದು, ವೇಷಭೂಷಣದಲ್ಲು ರೈತರನ್ನ ಪ್ರತಿನಿಧಿಸಿದ್ದು ವಿಶೇಷವಾಗಿತ್ತು.
ಸಿನಿಮಾದಲ್ಲಿ ನಟಿಸುವಾಸೆ:
ರೈತಾಪಿ ವರ್ಗದಲ್ಲಿ ಜನಿಸಿದ ನಾಗೇಶ್ ಇದೀಗಾ ಸಿನಿಮಾದಲ್ಲಿ ನಟಿಸುವ ಆಸೆ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಒಂದೆರಡು ಚಿತ್ರದಲ್ಲಿ ನಟಿಸಿರುವ ನಾಗೇಶ್‌ಗೆ ಬಾಲಿವುಡ್‌ನಿಂದಲು ಆಫರ್ ಬಂದಿದೆ. ಅದಕ್ಕಾಗಿ ತಯಾರಿ ಸಹ ಮಾಡಿಕೊಂಡಿರೋ ನಾಗೇಶ್, ಮಾಡೆಲಿಂಗ್ ಕ್ಷೇತ್ರದಲ್ಲಿ ಮತ್ತಷ್ಟು ಹೆಸರು ಮಾಡೋ ಇಂಗಿತ ವ್ಯಕ್ತಪಡಿಸದ್ದಾರೆ.