ಎದೆಯ ಮೇಲೆ ಸುಧಾಮೂರ್ತಿ ಅವರ ಭಾವಚಿತ್ರವನ್ನ ಹಚ್ಚೆ ಹಾಕಿಸಿಕೊಂಡ ಮೈಸೂರಿನ ಯುವಕ

ಮೈಸೂರು: ಇತ್ತೀಚಿನ ದಿನಗಳಲ್ಲಿ ಹೆತ್ತವರನ್ನು ನಿರ್ಲಕ್ಷ್ಯ ತೋರುವ ಮಕ್ಕಳೇ ಹೆಚ್ಚು, ವಯಸ್ಸಾದ ಕೂಡಲೇ ತಾಯಿಯನ್ನ ನೋಡಿಕೊಳ್ಳಲು ಹಿಂಜರಿಯುವ ಮಕ್ಕಳು ಇದ್ದಾರೆ. ಆದರೇ ಮೈಸೂರಿನ ಯುವಕನೋರ್ವ ತನ್ನ ಹೆತ್ತ ತಾಯಿಗಿಂತ ಮಿಗಿಲಾಗಿ ಆ ತಾಯಿಯ ಭಾವಚಿತ್ರವನ್ನ ತನ್ನ ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾರೆ. ಹೌದು ಆ ತಾಯಿ ಬೇರೆ ಯಾರು ಅಲ್ಲ ಇನ್ಫೋಸಿಸ್ ಸಂಸ್ಥಾಪಕಿ ಸುಧಾಮೂರ್ತಿ ಅವರು.

ಸುಧಾಮೂರ್ತಿ ಅವರ ಹುಟ್ಟು ಹಬ್ಬದ ಅಂಗವಾಗಿ ತನ್ನ ತಾಯಿಯಂತಯೇ ಸುಧಾಮೂರ್ತಿಯರನ್ನ ಪ್ರೀತಿಸುವ ಮೈಸೂರಿನ ಜೆಸಿ ನಗರದ ನಿವಾಸಿ ಲೋಕೇಶ್, ತನ್ನ ಬಲಗೈ ಮೇಲೆ ಮತ್ತು ಎದೆಯ ಭಾಗದಲ್ಲಿ ಸುಧಾಮೂರ್ತಿಯವರ ಟ್ಯಾಟೋ ಹಾಕಿಸಿಕೊಂಡಿದ್ದಾನೆ. ಸದಾ ಸಮಾಜದ ಒಳಿತಿಗಾಗಿ, ಮೃದು ಮನಸ್ಸಿನ ಕಷ್ಟದಲ್ಲಿರುವವರಿಗೆ ತತಕ್ಷಣ ನೆರವಾಗುವ, ಶ್ರೀಮಂತಿಕೆ ಇದ್ದರೂ ಅಸುಯೆ ಪಡದ, ಮಾನವೀಯ ಮೌಲ್ಯಗಳಿಗೆ ಹೆಚ್ಚಿನ ಹೊತ್ತು ನೀಡುವ, ಸಾಕಷ್ಟು ಜನರಿಗೆ ಉದ್ಯೋಗದಾತೆಯೂ ಆಗಿರುವ ಸುಧಾಮೂರ್ತಿಯವರ ಹುಟ್ಟು ಹಬ್ಬಕ್ಕೆ ಈತ ಚಾಮುಂಡಿಬೆಟ್ಟಕ್ಕೆ ಬರಿಗಾಲಲ್ಲಿ ಹೋಗಿ ಸುಧಾಮೂರ್ತಿ ಅಮ್ಮರಿಗೆ ಒಳಿತಾಗುವುವಂತೆ ಪೂಜೆ ಕೂಡ ಮಾಡಿಸಿದ್ದಾರೆ.

ನಾನು ಅತಿಯಾಗಿ ಪ್ರೀತಿಸುವ ನನ್ನ ಅಮ್ಮನಂತೆಯೇ ಸುಧಾಮೂರ್ತಿಯವರನ್ನ ಪ್ರೀತಿಸ್ತಿನಿ. ಸಮಾಜದ ಕಾಳಜಿ, ಪ್ರತಿಯೊಬ್ಬರನ್ನ ಪ್ರೀತಿಸುವ ಗುಣ, ಕಷ್ಟದಲ್ಲಿರುವರಿಗೆ ನೆರವಾಗುವುದು, ಅದ್ರಲ್ಲೂ ಸಾವಿರಾರು ಕೋಟಿಯ ಒಡತಿಯಾಗಿದ್ರೂ ಕೂಡ ಅವರ ಸರಳತೆ ಇದೆಲ್ಲಾ ಅದು ನನಗೆ ಸ್ಪೂರ್ತಿ. ನಾನು ಬೆಳಗ್ಗೆ ಎದ್ದಕೂಡಲೇ ಸುಧಾ ಅಮ್ಮರ ಪೋಟೋ ನೋಡಿಯೇ ನನ್ನ ಡ್ರೈವಿಂಗ್ ಕೆಲಸ ಆರಂಭಿಸೋದು. ಅವರೆ ನನಗೆ ಸ್ಪೂರ್ತಿ ಎನ್ನುತ್ತಾರೆ ‌ಲೋಕೇಶ್.

Scroll to Top