ತಾಲೀಮಿನ ವೇಳೆ ಕಾವೇರಿ ಆನೆಯ ಕಾಲಿಗೆ ಚುಚ್ಚಿದ ಮೊಳೆ

PC: Star Of Mysore

ಮೈಸೂರು: ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಕಾವೇರಿ ಆನೆಯ ಕಾಲಿಗೆ ಚೂಪಾದ ಮೊಳೆ ಯೊಂದು ಚುಚ್ಚಿದ ಘಟನೆ ನಿನ್ನೆ ನಡೆದಿದೆ.

ದಸರಾ ಆನೆಗಳ ಉಸ್ತುವಾರಿ ಹೊತ್ತವರ ಅಜಾಗರೂಕತೆಯಿಂದಾಗಿ ಭಾನುವಾರ ಬೆಳಿಗ್ಗೆ ತಾಲೀಮಿಗೆ ಹೊರಡುವ ವೇಳೆ ಅರಮನೆ ಕೋಟೆ ಆಂಜನೇಯ ದೇವಸ್ಥಾನದ ಬಳಿ ಕಾಲಿಗೆ ಮೊಳೆಯೊಂದು ಚುಚ್ಚಿದ್ದು, ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿ ಅದನ್ನು ತೆಗೆದು ಪ್ರಥಮ ಚಿಕಿತ್ಸೆ ನೀಡಿದ್ದಾರೆ.

ನಿತ್ಯವೂ ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ದಸರಾ ಗಜಪಡೆಯ ಮೆರವಣಿಗೆ ತಾಲೀಮು ನಡೆಯುತ್ತಿದ್ದು, ನಿನ್ನೆ ಬೆಳಿಗ್ಗೆ ಬೆಳಿಗ್ಗೆ 7.25ರ ವೇಳೆಗೆ ಕೂಡ ಅರಮನೆಯಿಂದ ಬನ್ನಿಮಂಟಪದ ಕಡೆಗೆ ಗಜಪಡೆ ತಾಲೀಮು ಹೊರಟಿತ್ತು. ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಕಾವೇರಿ ಆನೆಯ ಎಡಗಾಲಿಗೆ ಮೊಳೆಯೊಂದು ಚುಚ್ಚಿಕೊಂಡಿತ್ತು. ಸಿಬ್ಬಂದಿ ಮೊಳೆಯನ್ನು ಹೊರ ತೆಗೆದ ಬಳಿಕವೇ ಕಾವೇರಿ ಮುಂದೆ ಹೆಜ್ಜೆ ಇಟ್ಟಳು.

ಇನ್ನು ತಾಲೀಮು ನಡೆಸುವ ಗಜಪಡೆಯ ಮುಂದೆ ಚಲಿಸುವ ವಾಹನಕ್ಕೆ ಸ್ವಯಂಚಾಲಿತ ಮ್ಯಾಗ್ನೆಟಿಕ್ ಟ್ರ್ಯಾಲಿ ಅಳವಡಿಸ ಲಾಗಿರುತ್ತದೆ. ಗಜಪಡೆಗೂ ಮೊದಲೇ ಅದನ್ನು ಮುಂದೆ ಕೊಂಡೊ ಯ್ಯಲಾಗುತ್ತದೆ. ಆನೆ ತಾಲೀಮು ನಡೆಸುವ ಮಾರ್ಗ ಮಧ್ಯೆ ಕಬ್ಬಿಣದ ಮೊಳೆ, ಪಿನ್ನು ಇನ್ನಿತರ ಯಾವುದೇ ವಸ್ತುಗಳನ್ನು ಮ್ಯಾಗ್ನೇಟಿಕ್ ಉಪ ಕರಣ ತಕ್ಷಣ ಆಕರ್ಷಿಸುತ್ತದೆ. ಆದರೆ ಅದರ ಆಕರ್ಷಣೆಗೂ ಸಿಗದ ಕಬ್ಬಿಣದ ಮೊಳೆಯೊಂದು ಕಾವೇರಿ ಆನೆಯ ಕಾಲಿಗೆ ಚುಚ್ಚಿತ್ತು.

ಈ ಬಗ್ಗೆ ದಸರಾ ಆನೆಗಳ ಆರೋಗ್ಯ ನೋಡಿ ಕೊಳ್ಳುತ್ತಿರುವ ಪಶುವೈದ್ಯ ಡಾ.ಡಿ.ಎನ್.ನಾಗರಾಜು ಪ್ರತಿಕ್ರೀಯೆ ನೀಡಿ ಇದು ಒಂದು ಸಣ್ಣ ಘಟನೆ. ಆನೆಯ ಪಾದದ ಕೆಳಗೆ ಮಾವುತರು ಕೈಯಾಡಿಸಿದಾಗ ಮೊಳೆ ಇದ್ದದ್ದು ಗೊತ್ತಾಯಿತು. ತಕ್ಷಣ ಅದನ್ನು ತೆಗೆಯಲಾಯಿತು. ಅರಮನೆ ಬಳಿಯ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಆಯೋಜಿಸಲಾಗಿದ್ದ ಮ್ಯಾರಥಾನ್‌ ಕಾರ್ಯಕ್ರಮಕ್ಕಾಗಿ ಅಲ್ಲಲ್ಲಿಸಣ್ಣ ಸಣ್ಣ ಜರ್ಮನ್‌ ಡೇರೆ ಮತ್ತು ಶಾಮಿಯಾನಗಳನ್ನು ಹಾಕಲಾಗಿತ್ತು. ಡೇರೆಗಳನ್ನು ಹಾಕುವಾಗ ಅದರ ಕಾರ್ಮಿಕರು ಅಜಾಗರೂಕತೆಯಿಂದ ಮೊಳೆ ಮತ್ತು ಬಟ್ಟೆ ಪಿನ್‌ಗಳನ್ನು ಅಲ್ಲಲ್ಲಿ ಚೆಲ್ಲಿರುವುದು ಕಂಡು ಬಂದಿದೆ. ಇನ್ನು ಮುಂದೆ ನಾವು ಹೆಚ್ಚು ಜಾಗರೂಕರಾಗಿರುತ್ತೇವೆ. ಇಂತಹ ಘಟನೆ ಮರು ಕಳಿಸದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದರು.

Leave a Comment

Scroll to Top