ಮೈಸೂರು: ಕೊರೋನಾ ಮಹಾಮಾರಿಯಿಂದ ಲಕ್ಷಾಂತರ ಮಂದಿ ಸೇರಿ ಆಚರಿಸುತ್ತಿದ್ದ ನಂಜನಗೂಡಿನ ಪಂಚ ರಥೋತ್ಸವ ನೆನೆಗುದಿಗೆ ಬೀಳುತ್ತದೆ ಎಂದು ಭಾವಿಸಲಾಗಿತ್ತು. ಆದರೆ, ದೇವಸ್ಥಾನದ ಆವರಣದಲ್ಲಿ ಸಾಮಾಜಿಕ ಅಂತರದಲ್ಲೇ ನಂಜನಗೂಡು ನಂಜುಡೇಶ್ವರನ ರಥೋತ್ಸವ ಜರುಗಿದೆ.
ಗೌತಮ ರಥದ ತದ್ರೂಪಿ ಪುಟ್ಟ ರಥವನ್ನು ಮಾಡಿ ಬ್ರಾಹ್ಮಿ ಮುಹೂರ್ತದಲ್ಲಿ ಬೆಳಿಗ್ಗೆ 5:35ಕ್ಕೆ ಆರಂಭವಾಗಿ ಸದ್ದು ಗದ್ದಲವಿಲ್ಲದೆ ಸಾಂಪ್ರದಾಯಿಕವಾಗಿ ವೇದ ಮಂತ್ರಗಳೊಂದಿಗೆ ರಥದ ಬೀದಿಯಲ್ಲಿ ಸಾಗಿ ನಂಜುಂಡೇಶ್ವರ ರಥೋತ್ಸವ ಮುಕ್ತಾಯವಾಯ್ತು.
ವಿಡಿಯೋ ನೋಡಿ: