ನಾಳೆ ನಂಜನಗೂಡು ಪಂಚ‌ ಮಹಾರಥೋತ್ಸವ ನಡೆಯಲ್ಲ

ಮೈಸೂರು: ದಕ್ಷಿಣ ಕಾಶಿ ಎಂದು ಪ್ರಸಿದ್ಧಗೊಂಡ ನಂಜನಗೂಡಿನಲ್ಲಿ ನಾಳೆ(ಏಪ್ರಿಲ್ 4) ಶ್ರೀಕಂಠೇಶ್ವರ ಸ್ವಾಮಿಯ ‘ಪಂಚಮಹಾ ರಥೋತ್ಸವ’ ನಡೆಯಲ್ಲ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಇಂದು ಮಾಹಿತಿ ನೀಡಿದ ಅವರು ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಲು ಸೂಚನೆ ನೀಡಲಾಗಿದೆ. ದೇವಾಲಯದ ಒಳಗೆ ಯಾವುದೇ ಪೂಜೆ ಇದ್ದರೂ ಅರ್ಚಕರ ಸಾಮಾಜಿಕ ಅಂತರದಲ್ಲಿ ನೆರವೇರಲಿದೆ. ರಥ ಎಳೆಯುವುದು ಅಥವಾ ರಥಕ್ಕೆ ಉತ್ಸವ ಮೂರ್ತಿ ಪ್ರತಿಷ್ಠಾಪಿಸುವಂತಿಲ್ಲ. ಎಲ್ಲರೂ ಮನೆಯಿಂದಲೇ ದೇವರನ್ನು ಪ್ರಾರ್ಥಿಸಿ. ಯಾರೂ ದೇವಾಲಯದ ಬಳಿ ಬರದೆ ಹೊರಗೆ ಓಡಾಡದೇ ಮನೆಯಲ್ಲೇ ಇರಿ ಎಂದು ಕೋರಿಕೊಂಡಿದ್ದಾರೆ.

Scroll to Top