ಮೈಸೂರು ವಿವಿ ಘಟಿಕೋತ್ಸವ: ಬರೋಬರಿ 20 ಚಿನ್ನ, ‌5 ನಗದು ಬಹುಮಾನ ಬಾಚಿಕೊಂಡ ನೈಜೀರಿಯಾ ಮಹಿಳೆ

ಮೈಸೂರು: ಪ್ರತಿಷ್ಠಿತ ಮೈಸೂರು ವಿಶ್ವ ವಿದ್ಯಾನಿಲಯದ 99ನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮವು ನಗರದ ಕ್ರಾಫರ್ಡ್ ಭವನದಲ್ಲಿ ಭಾನುವಾರ ನಡೆಯಿತು. ನೈಜೀರಿಯಾ ಮಹಿಳೆ ಎಮೆಲೈಫ್ ಸ್ಟೆಲಾ ಚಿನೆವಾ ಎಂಬುವವರು ಬರೋಬರಿ 20 ಚಿನ್ನದ ಪದಕ, ‌5 ನಗದು ಬಹುಮಾನ ಬಾಚಿಕೊಳ್ಳುವ ಮೂಲಕ ಸಾಧನೆ ಮಾಡಿದ್ದಾರೆ.

ಈ ಮೂಲಕ ಮೈಸೂರು ವಿವಿಯ 99 ನೇ‌ ಘಟಿಕೋತ್ಸವದಲ್ಲಿ ನೈಜೀರಿಯಾ ಮಹಿಳೆ ಎಮೆಲೈಫ್ ಸ್ಟೆಲಾ ಚಿನೆವಾ ಎಲ್ಲರ ಗಮನ ಸೆಳೆದಿದ್ದಾರೆ. ಎಂಎಸ್ ಸಿ Chemistry ವಿಭಾಗದಲ್ಲಿ ದಾಖಲೆಯ ಸಾಧನೆ ಮಾಡಿದ್ದಾರೆ. ಇವರಿಗೆ ಮೈಸೂರ ವಿವಿ ಕುಲಪತಿ ಹೇಮಂತ್‌ ಕುಮಾರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಅಂತರಾಷ್ಟ್ರೀಯ ಸಾಂಸ್ಕೃತಿಕ ವಿನಿಮಯ ಯೋಜನೆ ಅಡಿ ಭಾರತದಲ್ಲಿ ಅಧ್ಯಯನ ಬಯಸಿದ್ದ ಸ್ಟೆಲಾ. ಮೈಸೂರಿನ ಬೋಗಾಧಿಯಲ್ಲಿ ವಾಸ್ತವ್ಯವಿದ್ದು ಮುಂದಿನ ದಿನಗಳಲ್ಲಿ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುವ ಆಸೆ ವ್ಯಕ್ತಪಡಿಸಿದ್ದಾರೆ.

ಕಾಡಸಿದ್ಧೇಶ್ವರ ಶ್ರೀಗಳಿಗೆ ಗೌರವ ಡಾಕ್ಟರೇಟ್:

ಇನ್ನು ಈ ಬಾರಿಯ ಗೌರವ ಡಾಕ್ಟರೇಟ್ ಅನ್ನ ಕಾಡಸಿದ್ಧೇಶ್ವರ ಮಠದ ಶ್ರೀಗಳಾದ ಕರಿವೃಷಭಾ ದೇಶಿಕೇಂದ್ರ ಶಿವಯೋಗೀಶ್ವರ ಮಹಾ ಸ್ವಾಮೀಜಿ ಅವರಿಗೆ ಪ್ರದಾನ ಮಾಡಲಾಯಿತು.

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಅಧ್ಯಕ್ಷರಾದ ಡಾ.ಅನಿಲ್ ಡಿ.ಸಹಬುಧೆ ಅವರು ಶ್ರೀ.ಮಾ.ನಿ.ಪ್ರಾ.ಕರಿವೃಷಭ ದೇಶಿಕೇಂದ್ರ ಶಿವಯೋಗಿ ಶ್ರೀಗಳಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು. ಮೈಸೂರು ವಿಶ್ವ ವಿದ್ಯಾನಿಲಯದ ಈ ಬಾರಿ ಮಾತಾ ಅಮೃತಾನಂದಮಯಿ ಮಠ ಕುಲಾಧಿಪತಿ, ಅಮೃತ ವಿಶ್ವ ವಿದ್ಯಾಪೀಠಮ್ ಅಮೃತಪುರಿ ಅಧ್ಯಕ್ಷರಾದ ಮಾತಾ ಅಮೃತಾನಂದಮಯಿ ದೇವಿ ಅವರಿಗೂ ಗೌರವ ಡಾಕ್ಟರೇಟ್ ಪ್ರಕಟಿಸಿದೆ. ಆದರೆ ಅಮೃತಾನಂದಮಯಿ ಇಂದಿನ ಸಮಾರಂಭಕ್ಕೆ ಗೈರಾಗಿದ್ದರು.

ಡಾಕ್ಟರೇಟ್ ಪ್ರದಾನ ನಂತರ ಮೈಸೂರು ವಿವಿಯ ಒಟ್ಟು 28163 ವಿಧ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು. 18127ಮಹಿಳಾ ವಿದ್ಯಾರ್ಥಿಗಳು, 10036ಪುರುಷ ವಿದ್ಯಾರ್ಥಿಗಳು ಪದವಿ ಪ್ರದಾನ ಮಾಡಲಾಯಿತು. 384 ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳಿಗೆ ಪಿಹೆಚ್‌ಡಿ ಪದವಿ, ಒಟ್ಟು 206ವಿದ್ಯಾರ್ಥಿಗಳಿಗೆ 368 ಪದಕಗಳು, 182 ಬಹುಮಾನಗಳ ವಿತರಣೆ ಮಾಡಲಾಯಿತು.

Scroll to Top