ಹೊಸ ವರ್ಷಾಚರಣೆ ಹಿನ್ನೆಲೆ: ನೂತನ ಫ್ಲೈಓವರ್ ಮೇಲೆ ವಾಹನ ಸಂಚಾರ ನಿರ್ಬಂಧ

ಮೈಸೂರು: ಹೊಸ ವರ್ಷಾಚರಣೆ ಹಿನ್ನೆಲೆ ಸುರಕ್ಷತೆ ಮತ್ತು ಸುಗಮ ಸಂಚಾರದ ಹಿತದೃಷ್ಟಿಯಿಂದ ಇಂದು ರಾತ್ರಿ ಮೈಸೂರಿನ ಹಿನಕಲ್ ಬಳಿ ಇರುವ ನೂತನ ಫ್ಲೈ ಓವರ್ ಮೇಲೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ನಗರದನಲ್ಲಿ 2019ರ ಹೊಸ ವರ್ಷಾಚರಣೆ ಯನ್ನು ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಚರಿಸಲಿದ್ದು, ಹೊಸವರ್ಷಾಚರಣೆಯ ಸಂಬಂಧ ಮೈಸೂರು-ಹುಣಸೂರು ರಸ್ತೆ-ಹಿನಕಲ್ ರಿಂಗ್ ರಸ್ತೆ ಜಂಕ್ಷನ್ ಬಳಿಯ ನೂತನ ಫ್ಲೈ ಓವರ್ ಮೇಲೆ ವಾಹನಗಳನ್ನು ಚಾಲಕರು/ಸವಾರರು ಅಜಾಗರೂಕತೆಯಿಂದ ವೇಗವಾಗಿ ಚಾಲನೆ ಮಾಡುವ ಸಾಧ್ಯತೆ ಇರುವುದರಿಂದ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಸಾರ್ವಜನಿಕರ ಸುರಕ್ಷತೆ ಮತ್ತು ಸುಗಮ ಸಂಚಾರದ ಹಿತದೃಷ್ಟಿಯಿಂದ ಹಾಗೂ ಅಪಘಾತಗಳನ್ನು ನಿಯಂತ್ರಿಸುವ ಹಿನ್ನೆಲೆಯಲ್ಲಿ ಹುಣಸೂರು ರಸ್ತೆಯಲ್ಲಿರುವ ಹಿನಕಲ್ ರಿಂಗ್ ರಸ್ತೆ ಜಂಕ್ಷನ್ ಬಳಿಯ ಫ್ಲೈ ಓವರ್ ಪ್ರಾರಂಭದಿಂದ-ಪಶ್ಚಿಮಭಾಗದ ರಸ್ತೆ ಅಂತ್ಯದವರೆಗೆ ಫ್ಲೈ ಓವರ್ ಮೇಲೆ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು
ಇಂದು ರಾತ್ರಿ 8 ಗಂಟೆಯಿಂದ ನಾಳೆ ಬೆಳಗ್ಗೆ 6 ಗಂಟೆಯವರಗೆ ನಿರ್ಬಂಧಿಸಲಾಗಿದೆ.

ಅಲ್ಲದೆ ಈ ಆದೇಶವನ್ನು ಕಟ್ಟು ನಿಟ್ಟಾಗಿ ಪಾಲಿಸಿ ಪೊಲೀಸರೊಂದಿಗೆ ಸಹಕರಿಸಬೇಕೆಂದು ನಗರ ಪೊಲೀಸ್ ಆಯುಕ್ತರಾದ ಡಾ||ಎ.ಸುಬ್ರಹ್ಮಣ್ಣೇಶ್ವರ ರಾವ್, ಐ.ಪಿ.ಎಸ್ ರವರು ಕೋರಿಕೊಂಡಿದ್ದಾರೆ.

Scroll to Top