ಮೈಸೂರು: ಮೈಸೂರಿನಿಂದ ಪ್ರಕಟವಾಗುವ ದೇಶದ ಏಕೈಕ ಸಂಸ್ಕೃತ ಪತ್ರಿಕೆ ‘ಸುಧರ್ಮ’ ದಿನಪತ್ರಿಕೆಯ ಸಂಪಾದಕ ಕೆ.ವಿ. ಸಂಪತ್ ಕುಮಾರ್ ಹಾಗೂ ಅವರ ಪತ್ನಿ ವಿದುಷಿ ವಿಜಯಲಕ್ಷ್ಮಿ ಕೆ.ಎಸ್. ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.
ಸುಧರ್ಮ ಪತ್ರಿಕೆ ಭಾರತದ ಏಕೈಕ ಸಂಸ್ಕೃತ ಪತ್ರಿಕೆ ಎಂಬ ಹೆಗ್ಗಳಿಕೆ ಹೊಂದಿದ್ದು, ಕಳೆದ ಕೆಲ ವರ್ಷಗಳಿಂದ ನಿರಂತರ ಮುದ್ರಣ ಕಾಣುತ್ತಿದೆ. ಪತ್ರಿಕೆಯ ಈ ಸಾಧನೆ ಗುರುತಿಸಿ ಸಂಪಾದಕರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕರ್ನಾಟಕದ ಸಾಧಕರು:
ಪದ್ಮವಿಭೂಷಣ: ಜಾರ್ಜ್ ಫರ್ನಾಂಡೀಸ್, ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ(ಮರಣೋತ್ತರ)
ಪದ್ಮಶ್ರೀ: ಎಂ.ಪಿ ಗಣೇಶ್(ಕ್ರೀಡೆ), ಡಾ. ಬೆಂಗಳೂರು ಗಂಗಾಧರ್ (ವೈದ್ಯಕೀಯ), ಭರತ್ ಗೋಯೆಂಕಾ(ಉದ್ಯಮ), ತುಳಸಿ ಗೌಡ(ಸಮಾಜ ಸೇವೆ), ಹರೇಕಳ ಹಾಜಬ್ಬ(ಸಮಾಜ ಸೇವೆ), ಕೆ.ವಿ ಸಂಪತ್ ಕುಮಾರ್ ಮತ್ತು ವಿದುಷಿ ಜಯಲಕ್ಷ್ಮಿ ಕೆ.ಎಸ್(ಸಾಹಿತ್ಯ, ಶಿಕ್ಷಣ, ಪತ್ರಿಕೋದ್ಯಮ), ವಿಜಯ ಸಂಕೇಶ್ವರ( ಉದ್ಯಮ)