ಛಾಯಾಚಿತ್ರ ಪ್ರದರ್ಶನದ ಮೂಲಕ ಮತದಾನ ಜಾಗೃತಿ ಅಭಿಯಾನ

ಮೈಸೂರು: ದಿನನಿತ್ಯ ಸಾವಿರಾರು ಜನರು ಬಸ್ ನಲ್ಲಿ ವಿವಿಧ ಪ್ರದೇಶ ತೆರಳಲು ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರಿಗೆ ಚುನಾವಣೆಯಲ್ಲಿ ಮತದಾನ ಮಾಡುವಂತ ಸಂದೇಶ ಸಾರುವ ಛಾಯಾಚಿತ್ರ ಪ್ರದರ್ಶನ ನಾಗರೀಕರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಅರಿವು ಮೂಡಿಸುತ್ತಿದೆ ಎಂದು ಜಿಲ್ಲಾ ಸ್ವೀಪ್ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕಾಧಿಕಾರಿ ಕೆ.ಜ್ಯೋತಿ ಅವರು ತಿಳಿಸಿದರು.

2019 ರ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಮತದಾನದ ಬಗ್ಗೆ ಮತದಾರರಿಗೆ ಅರಿವು ಮೂಡಿಸಲು ಮುಖ್ಯ ಚುನಾವಣಾಧಿಕಾರಿಗಳ ಕಛೇರಿ ಕರ್ನಾಟಕ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಆಯೋಜಿಸಿರುವ ಮತದಾನ ಜಾಗೃತಿ ಮೂಡಿಸುವ ಛಾಯಚಿತ್ರ ಪ್ರದರ್ಶನ ಕಾರ್ಯಮವನ್ನು ಅವರು ಉದ್ಘಾಟಿಸಿದರು.

ಇಂದಿನಿಂದ ಮೂರು ದಿನಗಳ ಕಾಲ ಛಾಯಾಚಿತ್ರ ಪ್ರದರ್ಶನ ನಡೆಯಲಿದೆ. ಅಸಕ್ತರಿಗೆ ಮೊದಲ ಪ್ರಾಶಸ್ತ್ಯ ಅವರಿಗಾಗಿ ವಿಶೇಷ ಸೌಲಭ್ಯ, ಅಕ್ರಮ ಕಂಡಲ್ಲಿ ಚಿತ್ರೀಕರಿಸಿ ಸಿ-ವಿಜಿಲ್ ಆ್ಯಪ್ ಮೂಲಕ ದೂರು ದಾಖಲಿಸಿ, ಹಣ,ಮಧ್ಯ ಹಾಗೂ ಮಾದಕ ವಸ್ತುಗಳ ಆಮಿಷಕ್ಕೆ ಒಳಗಾಗದಿರಿ, ಎಲ್ಲರೂ ಚೆನ್ನಾಗಿ ಆಡಿದ್ರೆ ಮ್ಯಾಚ್ ಗೆಲ್ಲುತ್ತೇವೆ ಪ್ರತಿಯೊಬ್ಬರು ವೋಟ್ ಮಾಡಿದ್ರೆ ಪ್ರಜಾಪ್ರಭುತ್ವ ಗೆಲ್ಲುತ್ತದೆ ಎಂಬ ಸಂದೇಶಗಳ ಪೋಟೋಗಳನ್ನು ಹಾಕಲಾಗಿದೆ‌.

ಓದು ವ್ಯಕ್ತಿತ್ವವನ್ನು ರೂಪಿಸುತ್ತದೆ ಮತದಾನ ದೇಶವನ್ನು ರೂಪಿಸುತ್ತದೆ.ಮಾಡಿ ಮಾಡಿ ಮತದಾನ ಇರಲಿ ದೇಶದ ಮೇಲೆ ಅಭಿಮಾನ. ಮತದಾನದಲ್ಲಿ ಹಿರಿಯ ಆದ್ಯತೆ ನಾವು ನಾಗರೀಕರಿಗೆ ನೆರವಾಗುತ್ತವೆ. ನಮ್ಮ ದೇಶದ ಭವಿಷ್ಯ ನಿರ್ಮಾಣ ಶಕ್ತಿ ನಮ್ಮ ಓಟಿಗಿದೆ. ಯಾವುದೇ ಮತದಾರ ಮತದಾನದಿಂದ ಹೊರಗುಳಿಯ ಬಾರದು ಎಂಬ ಚುನಾವಣೆ ಸಂದೇಶ ಸಾರುವ ಸಾಲುಗಳು ಛಾಯಾಚಿತ್ರ ಪ್ರದರ್ಶನದಲ್ಲಿ ನಾಗರೀಕರನ್ನು ಮತದಾನ ಕಡೆಗೆ ಸೆಳೆಯಲಿವೆ.

ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಮೈಸೂರು ಮಹಾನಗರಪಾಲಿಕೆ ಆಯುಕ್ತರಾದ ಶಿಲ್ಪಾನಾಗ್, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮೈಸೂರು ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಆರ್.ಅಶೋಕ್ ಕುಮಾರ್, ಜಿಲ್ಲಾ ಸ್ವೀಪ್ ಕಾರ್ಯದರ್ಶಿ ಕೃಷ್ಣ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Comment

Scroll to Top