
ಮೈಸೂರು: ಮೈಸೂರಿನಲ್ಲಿ ಮಹಿಳೆಯರಿಗಾಗಿ ವಿಶೇಷ ಪಿಂಕ್ ಪೆಟ್ರೋಲ್ ಬಂಕ್ ನಿರ್ಮಾಣವಾಗಿದ್ದು, ಇದು ರಾಜ್ಯದಲ್ಲೇ ವಿಶೇಷ ಎನ್ನಬಹುದು.
ನಗರದ ಬೋಗಾದಿ ರಸ್ತೆಯಲ್ಲಿ ಈ ಪೆಟ್ರೋಲ್ ಬಂಕ್ ಕಾರ್ಯ ಆರಂಭಿಸಿದ್ದು, ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ತಮ್ಮ ವಾಹನಕ್ಕೆ ಪೆಟ್ರೋಲ್ ಹಾಕಿಸಿಕೊಳ್ಳಲು ಅನುಕೂಲವಾಗುವಂತೆ ವ್ಯವಸ್ಥೆಗೊಳಿಸಲಾಗಿದೆ. ಈ ಮೂಲಕ ಮಹಿಳೆಯರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಾಗಿದೆ.

ಸಾಮಾನ್ಯವಾಗಿ ಎಲ್ಲ ಪೆಟ್ರೋಲ್ ಬಂಕ್‍ಗಳಲ್ಲಿ ಪುರಷರು, ಮಹಿಳೆಯರು ಸರತಿ ಸಾಲಿನಲ್ಲಿ ನಿಂತು ಪೆಟ್ರೋಲ್ ಹಾಕಿಸಿಕೊಳ್ಳುತ್ತಾರೆ. ಆದರೆ ಪಿಂಕ್ ಪೆಟ್ರೋಲ್ ಬಂಕ್‍ನಲ್ಲಿ ಮಹಿಳೆಯರಿಗೆ ಮಾತ್ರ ಪೆಟ್ರೋಲ್ ಹಾಕಿಸಿಕೊಳ್ಳಲು ಅವಕಾಶವಿದ್ದು, ಇಲ್ಲಿ ಪೆಟ್ರೋಲ್ ಹಾಕುವವರೂ ಸಹ ಮಹಿಳೆಯರೇ ಎಂಬುದು ಮತ್ತೊಂದು ವಿಶೇಷ.
ಪಿಂಕ್ ಮತಗಟ್ಟೆ ಮೂಲಕ ಮತದಾನಕ್ಕೆ ಮಹಿಳೆಯರನ್ನು ಪ್ರೋತ್ಸಾಹಿಸಿದ ಮಾದರಿಯಲ್ಲೇ ಪಿಂಕ್ ಪೆಟ್ರೋಲ್ ಬಂಕ್‍ನ್ನು ಆರಂಭಿಸಿದ್ದು, ಮಹಿಳೆಯರು ಕಾಯುವಂತಹ ಕಿರಿಕಿರಿ ತಪ್ಪಿಸಲು ಬೇಗ ಪೆಟ್ರೋಲ್ ಹಾಕಿಸಿಕೊಂಡು ತಮ್ಮ ಕೆಲಸ ಕಾರ್ಯಗಳಿಗೆ ತೆರಳಲು ಅನುವಾಗುವಂತೆ ವ್ಯವಸ್ಥೆ ಮಾಡಲಾಗಿದೆ.
You must be logged in to post a comment.