ಅಂತರಾಷ್ಟ್ರೀಯ ಯೋಗ ದಿನಕ್ಕೆ ಮೈಸೂರಿನಲ್ಲಿ ಭರ್ಜರಿ ಸಿದ್ಧತೆ: ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸುವ ಸಾಧ್ಯತೆ..!

ಮೈಸೂರು: ಜೂನ್ 21ರಂದು ನಡೆಯಲಿರುವ ವಿಶ್ವ ಯೋಗ ದಿನಾಚರಣೆಗೆ ಮೈಸೂರಿನಲ್ಲಿ ಭರ್ಜರಿ ಸಿದ್ಧತೆಗಳು ನಡೆಯುತ್ತಿದ್ದು ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮನ ಸಾಧ್ಯತೆ ಇದೆ.

ಮೈಸೂರು ಯೋಗ ಒಕ್ಕೂಟದ ಮನವಿಯನ್ನು ಪ್ರಧಾನ ಮಂತ್ರಗಳ ಕಚೇರಿ ಪರಿಗಣಿಸಿದೆ. ಪಿಎಂಒಯಿಂದ 5 ನಗರಗಳ ಪಟ್ಟಿ ಸಿದ್ಧ ಪಡಿಸಲಾಗಿದೆ. ಪ್ರಧಾನಿ ಭಾಗವಹಿಸುವ ನಗರಗಳ ಪಟ್ಟಿಯಲ್ಲಿ ಮೈಸೂರಿಗೂ ಸ್ಥಾನ ಸಿಕ್ಕಿದೆ.

ಪ್ರಧಾನಿ ಕಚೇರಿ ದೆಹಲಿ, ಶಿಮ್ಲಾ, ಅಹಮದಾಬಾದ್, ರಾಂಚಿ ಮತ್ತು ಮೈಸೂರು ಪಟ್ಟಿ ಮಾಡಿದ್ದು, ಈ ಬಗ್ಗೆ ಜಿಲ್ಲಾಡಳಿತಕ್ಕೆ ಪ್ರಧಾನ ಮಂತ್ರಗಳ ಕಚೇರಿಯಿಂದ ಅಧಿಕೃತ ಮಾಹಿತಿ ಬಂದಿದೆ.

ಈಗಾಗಲೇ ದೆಹಲಿ, ಅಹಮದಾಬಾದ್ ಕಾರ್ಯಕ್ರಮಗಳಲ್ಲಿ ನರೇಂದ್ರ ಮೋದಿ ಭಾಗವಹಿಸಿದ್ದಾರೆ. ಹೀಗಾಗಿ ಈ ಬಾರಿ ಮೈಸೂರಿಗೆ ಆಗಮಿಸುವ ಸಾಧ್ಯತೆ ಇದೆ. ಪ್ರಧಾನಿ ಆಗಮಿಸಿದರೆ ಮೈಸೂರಿಗೆ ಯೋಗ ನಗರ ಕೀರ್ತಿ ಸಿಗಲಿದೆ.

ಯಶಸ್ವಿಯಾಗಿ ನಡೆದ ಯೋಗ ರಿಹರ್ಸಲ್

ವಿಶ್ವ ಯೋಗ ದಿನಕ್ಕೆ ಯೋಗ ನಗರಿ ಮೈಸೂರು ಸಜ್ಜಾಗಿದ್ದು, ಭಾನುವಾರ ನಡೆದ ನಾಲ್ಕನೇ ಹಂತದ ಯೋಗ ರಿಹರ್ಸಲ್ ಯಶಸ್ವಿಯಾಗಿ ನಡೆಯಿತು.

ನಿನ್ನೆ ಮುಂಜಾನೆ ನಾಲ್ಕನೇ ಹಂತದ ಯೋಗ ರಿಹರ್ಸಲ್ ನಡೆದಿದ್ದು, ನಗರದ ಚಾಮರಾಜ ವೃತ್ತದಿಂದ ಹಾರ್ಡಿಂಗ್ ವೃತ್ತದ ರಾಜಪಥದಲ್ಲಿ ಯೋಗಾಭ್ಯಾಸ ನಡೆಸಲಾಯಿತು.

ಈಗಾಗಲೇ ಕಳೆದ ಎರಡು ವರ್ಷಗಳಿಂದಲೂ ಗಿನ್ನಿಸ್ ದಾಖಲೆ ಮಾಡಿರುವ ಮೈಸೂರು ಈ ಬಾರಿಯೂ ಮತ್ತೊಂದು ದಾಖಲೆ ಮಾಡಲು ಸಿದ್ಧವಾಗಿದ್ದು, ಯೋಗಪಟುಗಳು ಕೂಡ ಯೋಗ ಪ್ರದರ್ಶಿಸಲು ಸಿದ್ಧರಾಗಿದ್ದಾರೆ. ಇಂದು ಮುಂಜಾನೆ ನಡೆದ ಯೋಗಾಭ್ಯಾಸದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು.

Scroll to Top