ಪಾಸ್ ಬಳಸಿ ಮೈಸೂರಿಗೆ ಬಂದ 334 ಮಂದಿಗೆ ಕ್ವರಂಟೈನ್

ಮೈಸೂರು: ಅಂತರ್ ಜಿಲ್ಲಾ ಪ್ರಯಾಣಕ್ಕೆ ಅವಕಾಶ ನಿಡಿದ ಬೆನ್ನಲ್ಲೆ ಮೊದಲ ದಿನವೇ ಪಾಸ್ ಬಳಸಿ ಬೆಂಗಳೂರಿನಿಂದ ಮೈಸೂರಿಗೆ ಸೋಮವಾರ ಒಟ್ಟು 334 ಮಂದಿ ಆಗಮಿಸಿದ್ದು, ಇವರನ್ನು ಹೋಂ ಕ್ವರಂಟೈನ್ ಮಾಡಲಾಗಿದೆ.

ಲಾಕ್ ಡೌನ್ ಸಡಿಲವಾಗುತ್ತಿದ್ದಂತೆ ಬೆಂಗಳೂರು ಬಿಟ್ಟು ಬರುತ್ತಿರುವ ಜನರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ. ಸೋಮವಾರ 18 ಕೆಎಸ್.ಆರ್.ಟಿಸಿ ಬಸ್’ಗಳಲ್ಲಿ ಬಂದ 272 ಜನರ ಆರೋಗ್ಯವನ್ನು ಸಾತಗಳ್ಳಿಯ ಬಸ್ ನಿಲ್ದಾಣದಲ್ಲಿ ತಪಾಸಣೆ ಮಾಡಿ ಅವರ ವಿಳಾಸ ಪಡೆದು ಹ್ಯಾಂಡ್ ಸೀಲ್ ಹಾಕಿ ಹೋಂ ಕ್ವಾರಂಟೈನ್ ಮಾಡಲಾಗಿದೆ.

ಇನ್ನು 334 ಮಂದಿಯ ಪೈಕಿ ವಯಕ್ತಿಕ ವಾಹನಗಳಲ್ಲಿ ಬಂದ 62 ಮಂದಿಯನ್ನು ಕಳಸ್ತವಾಡಿ ಚೆಕ್ ಪೋಸ್ಟ್ ಬಳಿ ತಪಾಸಣೆ ಮಾಡಿ ಹ್ಯಾಂಡ್ ಸೀಲ್ ಹಾಕಿ ಹೋಂ ಕ್ವಾರಂಟೈನ್ ಮಾಡಲಾಗಿದೆ.

ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ನಗರ ಪೊಲೀಸರು ಈ ಕಾರ್ಯದಲ್ಲಿ ನಿರತರಾಗಿದ್ದು, ಹೀಗೆ ಬಂದವರ ಪ್ರಯಾಣದ ಹಿನ್ನಲೆಯನ್ನು ದಾಖಲಿಸಿಕೊಳ್ಳಲಾಗುತ್ತಿದೆ.

Source: Andolana

Leave a Comment

Scroll to Top