ಮೈಸೂರು ರಾಜವಂಶದ ಖಾಸಗಿ ದಸರಾಗೆ ಸಾರ್ವಜನಿಕರು, ಮಾಧ್ಯಮಕ್ಕೆ ನಿರ್ಬಂಧ

ಮೈಸೂರು: ಅರಮನೆಯಲ್ಲಿ ರಾಜವಂಶಸ್ಥರು ನಾಡಹಬ್ಬ ದಸರಾ ಮಹೋತ್ಸವ ಪ್ರಯುಕ್ತ ಧಾರ್ಮಿಕ ಪೂಜಾ ಕೈಂಕರ್ಯ ಕೈಗೊಳ್ಳಲಿದ್ದು ಕೋವಿಡ್ ಕಾರಣ ಕುಟುಂಬದ ಸದಸ್ಯರು ಒಳಗೊಂಡಂತೆ ಸಾರ್ವಜನಿಕರಿಗೆ ಹಾಗೂ ಮಾಧ್ಯಮದವರಿಗೆ ಈ ಬಾರಿ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ರಾಜಮಾತೆ ಪ್ರಮೋದಾದೇವಿ ಒಡೆಯರ್ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಪ್ರಮೋದಾದೇವಿ, ಮೈಸೂರು ಅರಮನೆಯಲ್ಲಿ 2020ನೇ ಸಾಲಿನ ಶರನ್ನವರಾತ್ರಿ ಪೂಜಾ ವಿಧಿಗಳನ್ನು ಕೇವಲ ಸಾಂಪ್ರದಾಯಕವಾಗಿ ನಡೆಸಲಾಗುವುದು. ಕೊರೊನಾ ಮುನ್ನೆಚ್ಚರಿಕೆ ಕ್ರಮವಾಗಿ ಆಚರಣೆಯಲ್ಲಿ ಕುಟುಂಬ ಸದಸ್ಯರನ್ನೂ ಒಳಗೊಂಡಂತೆ ಸಾರ್ವಜನಿಕರು ಹಾಗೂ ಮಾಧ್ಯಮಗಳು ಭಾಗವಹಿಸುವಿಕೆ ಇರುವುದಿಲ್ಲ ಎಂದಿದ್ದಾರೆ.

Scroll to Top