ದಿನೇ ದಿನೇ ಶ್ರೀಮಂತೆಯಾಗುತ್ತಿರುವ ನಾಡ ಅಧಿದೇವತೆ: ಚಾಮುಂಡಿಬೆಟ್ಟ ದೇಗುಲದಲ್ಲಿ ದಾಖಲೆಯ ಹಣ ಸಂಗ್ರಹ

ಮೈಸೂರು: ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ದಿನೇ ದಿನೇ ಶ್ರೀಮಂತಳಾಗುತ್ತಿದ್ದು ಚಾಮುಂಡಿ ಬೆಟ್ಟಕ್ಕೆ ಕಾಣಿಕೆ ರೂಪದಲ್ಲಿ ಕೋಟ್ಯಾಂತರ ರೂಪಾಯಿ ಹಣ ಹರಿದು ಬರುತ್ತಿದೆ.

ದಿನೇ ದಿನೇ ಶ್ರೀಮಂತ ದೇವತೆ ಆಗುತ್ತಿದ್ದಾಳೆ ನಾಡಿನ ಅಧಿದೇವತೆ. ಚಾಮುಂಡಿ ಬೆಟ್ಟದ ದೇಗುಲದಲ್ಲಿ ಕಾಣಿಕೆ ರೂಪದಲ್ಲಿ ಕೋಟ್ಯಾಂತರ ಹಣ ಹರಿದು ಬರುತ್ತಿದೆ. ಚಾಮುಂಡಿ ಬೆಟ್ಟದಲ್ಲಿ ಹುಂಡಿ ಎಣಿಕೆ ನಡೆದಿದ್ದು ದಾಖಲೆ ಪ್ರಮಾಣದಲ್ಲಿ ಹಣ ಸಂಗ್ರಹವಾಗಿದೆ. ಈ‌ ಬಾರಿ 1,57,81,481 ರೂಪಾಯಿ ಸಂಗ್ರಹ ವಾಗಿದೆ. ಕಳೆದ ಬಾರಿ 1,10,55,892 ರೂ ಹುಂಡಿಯಲ್ಲಿ ಸಂಗ್ರಹವಾಗಿತ್ತು. ಕಳೆದ ಬಾರಿಗಿಂತ 47ಲಕ್ಷ ಅಧಿಕ ಹಣ ಸಂಗ್ರಹವಾಗಿದೆ.

ವಿಶೇಷ ದರ್ಶನ, ಲಾಡು ಹಾಗೂ ಸೀರೆ ಹರಕೆ ಆದಾಯ ಹೊರತುಪಡಿಸಿ ಕೋಟ್ಯಂತರ ರೂ.ಹಣ ಸಂಗ್ರಹವಾಗಿದೆ. ರಾಜ್ಯವಷ್ಟೇ ಅಲ್ಲದೇ ದೇಶ ವಿದೇಶಗಳಿಂದಲೂ ಮೈಸೂರಿಗೆ ಆಗಮಿಸುವ ಪ್ರವಾಸಿಗರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆಯುತ್ತಾರೆ.

Leave a Comment

Scroll to Top