ಮೈಸೂರು: ರಾಜ್ಯದಲ್ಲೇ ಮೈಸೂರು ಮಹಾನಗರ ಪಾಲಿಕೆ ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದು ಪೌರಕಾರ್ಮಿಕರ ಹಿತದೃಷ್ಟಿಯಿಂದ ಮೈಸೂರಿನಲ್ಲಿ ಒಳಚರಂಡಿ ಸ್ವಚ್ಚತೆಗೆ ರೊಬೋಟ್ ಯಂತ್ರ ಬಳಕೆ ಮಾಡಲಾಗುತ್ತಿದೆ.
ಮ್ಯಾನ್ ಹೋಲ್ ಸ್ವಚ್ಚಗೊಳಿಸಲು ಈ ರೋಬೋಟ್ ಬಹಳ ಉಪಯುಕ್ತವಾಗಲಿದೆ. ಈಗಾಗಲೇ ಪಾಲಿಕೆಯು ‘ಬ್ಯಾಂಡಿಕೂಟ್ ರೋಬೊಟ್’ ಖರೀದಿಸಿದೆ. ಶೀಘ್ರದಲ್ಲೇ ನಗರದ ಒಳಚರಂಡಿ ಸ್ವಚ್ಚತೆಗೆ ರೊಬೋಟ್ ಬಳಕೆ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ. ನಗರಾಭಿವೃದ್ಧಿ ಸಚಿವರಿಂದ ಯಂತ್ರಕ್ಕೆ ಚಾಲನೆ ಸಿಗಲಿದೆ.
ಕಾರ್ಮಿಕರು ಅನಾರೋಗ್ಯ ಹಾಗೂ ಅವಘಡಗಳ ತಪ್ಪಿಸಲು ಈ ಯಂತ್ರ ಸಹಾಯಕಾರಿಯಾಗಲಿದೆ. ಈ ಯಂತ್ರ ಅಳವಡಿಕೆಯಿಂದ ಸ್ವಚ್ಚತೆಯಲ್ಲಿ ಮೈಸೂರು ಮತ್ತೊಂದು ಹೆಜ್ಜೆ ಮುಂದೆಸಾಗಲಿದೆ ಎಂದು ಪಾಲಿಕೆ ಆಯುಕ್ತ ಗುರುದತ್ತ್ ಹೆಗ್ಡೆ ಮಾಹಿತಿ ನೀಡಿದ್ದಾರೆ.