ಮೈಸೂರು: ಮೈಸೂರಿನಲ್ಲಿ ಕೊರೊನಾ ಕಂಟ್ರೋಲ್’ಗೆ ಬಂದಿರುವ ಬಗ್ಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಮಾಹಿತಿ ನೀಡಿದ್ದಾರೆ.
ಮೈಸೂರಿನಲ್ಲಿ ನಾವು ಕೊರೊನಾವನ್ನ ನಿಯಂತ್ರಣಕ್ಕೆ ತರುತ್ತಿದ್ದೇವೆ. ಕೊರೊನಾ ಸಾವಿನ ಪ್ರಮಾಣ ಹೆಚ್ಚಾಗಿದುದ್ದು ತ್ವರಿತ ಚಿಕಿತ್ಸೆ ಸಿಗದ ಕಾರಣ. ಈ ಬಗ್ಗೆ ನಾವು ಹೆಚ್ಚಿನ ಗಮನ ಹರಿಸಿದೇವು. ತಾಲ್ಲೂಕು ಕೇಂದ್ರದಲ್ಲಿ ಹೆಚ್ಚಿನ ವ್ಯವಸ್ಥೆ ಕಲ್ಪಿಸಿದೇವು. ಹೆಚ್ಚು ಹೆಚ್ಚು ಟೆಸ್ಟ್ ಹಾಗೂ ಆಕ್ಸಿಜನ್ ಮತ್ತು ಬೆಡ್ ವ್ಯವಸ್ಥೆ ಮಾಡಿದೇವು ಎಂದು ತಿಳಿಸಿದರು.
ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಹಾಕಿಕೋಳ್ಳಬೇಕು. ಆಗಷ್ಟೇ ನಾವು ಕೊರೊನಾವನ್ನ ನಿಯಂತ್ರಣ ಮಾಡಲು ಸಾಧ್ಯ ಎಂದರು.
ಪ್ರವಾಸಿತಾಣಗಳನ್ನ ಬಂದ್ ಮಾಡುವುದಿಲ್ಲ:
ಪ್ರವಾಸಿತಾಣಗಳನ್ನ ಬಂದ್ ಮಾಡುವುದಾಗಲಿ, ಜಿಲ್ಲಾ ಗಡಿಗಳನ್ನ ಬಂದ್ ಮಾಡುವುದಾಗಲಿ ಸಾಧ್ಯವಿಲ್ಲ. ಅದಕ್ಕಾಗಿ ಅರಮನೆಯಲ್ಲಿ ಕೊರೊನಾ ಟೆಸ್ಟ್ ಮಾಡುತ್ತಿದ್ದೇವೆ. ಇದಕ್ಕಾಗಿ ಜನರು ಸಹಕರಿಸಬೇಕು. ಕೆಲವರಿಗೆ ಇದು ಸಮಸ್ಯೆ ಅನ್ನಿಸಬಹುದು ಆದ್ರೆ ಅನಿವಾರ್ಯ.
ಸದ್ಯಕ್ಕೆ ಆಕ್ಸಿಜನ್ ಹಾಗೂ ಬೆಡ್ ವ್ಯವಸ್ಥೆ ಇದೆ. ಜನರು ಸಹಕಾರ ನೀಡಿದ್ರೆ ಕೊರೊನಾ ನಿಯಂತ್ರಣ ಮಾಡಬಹುದು ಎಂದು ಡಿಸಿ ರೋಹಿಣಿ ಸಿಂಧೂರಿ ಹೇಳಿಕೆ ನಿಡಿದ್ದಾರೆ.