ಮೈಸೂರು: ಕನ್ನಡ ಚಲನಚಿತ್ರ ನಟರಾದ ಚಿಕ್ಕಣ್ಣ ಅವರು ಮೈಸೂರು ಮೃಗಾಲಯದಲ್ಲಿ ಚಿರತೆ ದತ್ತು ಪಡೆಯುವ ಮೂಲಕ ಪ್ರಾಣಿ ಪ್ರೀತಿ ಮೆರೆದಿದ್ದಾರೆ.
ಚಿಕ್ಕಣ್ಣ ಹಾಗೂ ಅವರ ಸ್ನೇಹಿತರು ಮೈಸೂರು ಮೃಗಾಲಯದಲ್ಲಿ 87,000ರೂ. ಪಾವತಿಸಿ ಪ್ರಾಣಿ ಪಕ್ಷಿಗಳನ್ನು ದತ್ತು ಸ್ವೀಕರಿಸಿದ್ದಾರೆ.
ನಟ ಚಿಕ್ಕಣ್ಣ 35,000ರೂ, ಪಾವತಿಸಿ ಚಿರತೆಯನ್ನು, ಸಿದ್ದೇಗೌಡ 3,500ರೂ ಪಾವತಿಸಿ ಕಾಳಿಂಗಸರ್ಪವನ್ನು, ಎಂಮೋಹನ್ ಕುಮಾರ್ 17,500ರೂ ಪಾವತಿಸಿ 5 ಬಿಳಿಯನವಿಲುಗಳನ್ನು, ಡೆನ್ ತಿಮ್ಮಯ್ಯ 14,000ರೂ ಪಾವತಿಸಿ 4 ನವಿಲುಗಳನ್ನು, ಯಶಸ್ ಸೂರ್ಯ 13,500ರೂ ಪಾವತಿಸಿ ಕಾಳಿಂಗಸರ್ಪ ಮತ್ತು ಅನಕೊಂಡ ಹಾವನ್ನು, ಲೋಕೇಶ್ ಬಿ.ಎಸ್ 3,500 ರೂ. ಪಾವತಿಸಿ ಕಾಳಿಂಗಸರ್ಪವನ್ನು ಒಂದು ವರ್ಷದ ಅವಧಿಗೆ ದತ್ತು ಸ್ವೀಕರಿಸಿದ್ದಾರೆ.
ಮೃಗಾಲಯದ ಪ್ರಾಣಿಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ, ಅವುಗಳ ಸಂರಕ್ಷಣೆಗೆ ವಿಶೇಷ ಒಲವಿನಿಂದ ತಮ್ಮ ಬೆಂಬಲವನ್ನು ನೀಡಿರುವ ಚಿಕ್ಕಣ್ಣ ಮತ್ತು ಸ್ನೇಹಿತರನ್ನು ಮೈಸೂರು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಅಭಿನಂದಿಸಿದ್ದಾರೆ.