ಪುರಾಣ ಪ್ರಸಿದ್ದ ಚಂದ್ರಮೌಳೇಶ್ವರ ದೇವಾಲಯದಲ್ಲಿ ಸೂರ್ಯರಶ್ಮಿಯ ವಿಸ್ಮಯ

ಪುರಾಣ ಪ್ರಸಿದ್ದ ಚಂದ್ರಮೌಳೇಶ್ವರ ದೇವಾಲಯದಲ್ಲಿ ಸೂರ್ಯರಶ್ಮಿಯ ವಿಸ್ಮಯ

ಮಂಡ್ಯ: ಮಕರ ಸಂಕ್ರಾಂತಿ ಹಿನ್ನಲೆ ಮಂಡ್ಯದ ಪುರಾಣ ಪ್ರಸಿದ್ದ ಚಂದ್ರಮೌಳೇಶ್ವರ ದೇವಾಲಯದಲ್ಲಿ ಸೂರ್ಯರಶ್ಮಿಯ ವಿಸ್ಮಯ ಜರುಗಿತು.

ಮಕರ ಸಂಕ್ರಮಣದಲ್ಲಿ ಸೂರ್ಯ ದಕ್ಷಿಣಾಯನದಿಂದ ಉತ್ತರಾಯನಕ್ಕೆ ಪಥ ಬದಲಿಸುತ್ತಾ. ಈ ಹಿನ್ನಲೆಯಲ್ಲಿ ಶ್ರೀರಂಗಪಟ್ಟಣದ ಚಂದ್ರವನ‌ ಆಶ್ರಮದ ಪುರಾಣ ಪ್ರಸಿದ್ದ ಚಂದ್ರಮೌಳೇಶ್ವರ ದೇವಸ್ಥಾನದ ಗರ್ಭಗುಡಿಯ ಲಿಂಗದ ಮೇಲೆ ಸೂರ್ಯನ ಪ್ರಥಮ ರಶ್ಮಿ ಸ್ವರ್ಶ ಮಾಡಿತು.

ಪುರಾಣ ಪ್ರಸಿದ್ದ ಚಂದ್ರಮೌಳೇಶ್ವರ ದೇವಾಲಯದಲ್ಲಿ ಸೂರ್ಯರಶ್ಮಿಯ ವಿಸ್ಮಯ

ಬೆಳಿಗ್ಗೆ 7-10 ಸಮಯದಲ್ಲಿ ಸೂರ್ಯ ರಶ್ಮಿ ಲಿಂಗ ಸ್ವರ್ಶ ಮಾಡಿದೆ. ಇನ್ನು ಈ ವಿಸ್ಮಯ ಕಣ್ತುಂಬಿಕೊಳ್ಳಲು ಮುಂಜಾನೆ ದೇವಾಲಯಕ್ಕೆ ಬಂದಿದ್ದ ಭಕ್ತಗಣ ಲಿಂಗ ಸ್ವರ್ಶ ಮಾಡಿದ ಸೂರ್ಯ ರಶ್ಮಿಯ ಕಂಡು ಪುಳಕಿತರಾದರು.

ಬಳಿಕ ಚಂದ್ರವನ ಆಶ್ರಮದ ಪೀಠಾಧ್ಯಕ್ಷರಾದ ಶ್ರಿ ತ್ರಿನೇತ್ರ ಮಹಂತ ಸ್ವಾಮೀಜಿ ನೇತೃತ್ವದಲ್ಲಿ ಆಶ್ರಮದಲ್ಲಿ ಗೋ ಪೂಜೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು. ಭಕ್ತರಿಗೆ ಉಪದೇಶ ನೀಡಿದ ಸ್ವಾಮೀಜಿಗಳು ಸಂಕ್ರಾಂತಿ ಎಲ್ಲರಿಗೂ ಶುಭಾಶಯ ಕೋರಿದರು.

Scroll to Top