ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಈ ಬಾರಿಯೂ ಬಾಲಕಿಯರೇ ಮೇಲುಗೈ

ಬೆಂಗಳೂರು: ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿರುವ ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟಗೊಂಡಿದೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ಪಿಯು ಬೋರ್ಡ್ ನಲ್ಲಿ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಮತ್ತು ಪಿಯುಸಿ ಬೋರ್ಡ್ ನಿರ್ದೇಶಕಿ ಶಿಖಾ ಅವರು ಇಂದು ಫಲಿತಾಂಶವನ್ನು ಪ್ರಕಟಿಸಿದರು. ಕಳೆದ ಮಾರ್ಚ್ ತಿಂಗಳಿನಲ್ಲಿ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟಗೊಂಡಿದೆ.

ಫಲಿತಾಂಶದಲ್ಲಿ ಉಡುಪಿ – ದಕ್ಷಿಣ ಕನ್ನಡ ಮೇಲುಗೈ ಸಾಧಿಸಿವೆ. ರಾಜ್ಯದಲ್ಲೇ ಉಡುಪಿ ಪ್ರಥಮ ಸ್ಥಾನ ದಕ್ಷಿಣ ಕನ್ನಡ ದ್ವಿತೀಯ ಸ್ಥಾನ. ಕೊಡಗು ಮೂರನೇ ಸ್ಥಾನದಲ್ಲಿದ್ದರೆ ಚಿತ್ರದುರ್ಗ ಶೇ.51.42 ಫಲಿತಾಂಶ ದಾಖಲಿಸಿ ಕೊನೆಯ ಸ್ಥಾನಕ್ಕೆ ಕುಸಿದಿದೆ.

ಇನ್ನು ಈ ಬಾರಿ ಫಲಿತಾಂಶದಲ್ಲಿ ಮೈಸೂರೂ 15ನೇ ಸ್ಥಾನ ಪಡೆದಿದೆ.

ಈ ಬಾರಿ ಸುಮಾರು 6.50 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಒಟ್ಟು ಶೇ.61.73 ಫಲಿತಾಂಶ ಪ್ರಕಟವಾಗಿದ್ದು, ಒಟ್ಟು 4,14,587 ಮಂದಿ ಪಾಸ್ ಆಗಿದ್ದಾರೆ. 1,86,690 ಬಾಲಕರು, 2,27,897 ಬಾಲಕಿಯರು ತೇರ್ಗಡೆಯಾಗಿದ್ದಾರೆ. 54,823 ಮಂದಿ ಉನ್ನತ ಶ್ರೇಣಿ, 2,27,301 ಮಂದಿ ಪ್ರಥಮ ದರ್ಜೆಯಲ್ಲಿ ಪಾಸ್ ಆಗಿದ್ದಾರೆ.

ಇನ್ನು ಮಧ್ಯಾಹ್ನ 12 ಗಂಟೆ ನಂತರ ಪಿಯುಸಿ ವೆಬ್ ಸೈಟ್ ನಲ್ಲಿ ಅಧಿಕೃತವಾಗಿ ಫಲಿತಾಂಶ ಪ್ರಕಟಗೊಳ್ಳಲಿದೆ.

ಫಲಿತಾಂಶ ಲಭ್ಯವಾಗುವ ವೆಬ್ ಸೈಟ್

ಈ ಲಿಂಕ್ ಕ್ಲಿಕ್ ಮಾಡಿ: https://pue.kar.nic.in

ಈ ಲಿಂಕ್ ಕ್ಲಿಕ್ ಮಾಡಿ: www.karresults.nic.in

Leave a Comment

Scroll to Top