ಮೈಸೂರಿನ ಕೆ.ಆರ್.ನಗರ ತಾಲ್ಲೂಕಿನ ಹಲವೆಡೆ ಲಘು ಭೂಕಂಪ: ಆತಂಕಗೊಂಡ ಜನ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭೂಕಂಪನದ ಅನುಭವವಾಗಿದೆ. ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಶುಕ್ರವಾರ ಭೂಮಿ ಕಂಪಿಸಿದ ಅನುಭವವಾಗಿದೆ.

ಸಂಜೆ 5:15 ರ ಸುಮಾರಿಗೆ ಶಬ್ದದ ಜತೆ 2 ಸೆಕೆಂಡ್‌ಗಳ ಕಾಲ ಭೂಮಿ ಕಂಪಿಸಿದೆ. ಇದರಿಂದ ಭಯಭೀತರಾದ ಜನರು ಮನೆಯಿಂದ ಹೊರಗೋಡಿ ಬಂದು ರಸ್ತೆಯಲ್ಲಿ ಗುಂಪು ಗುಂಪಾಗಿ ನಿಂತರು ಎಂದು ತಿಳಿದುಬಂದಿದೆ‌.

ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮ, ಚುಂಚನಕಟ್ಟೆ, ಅಂಕನಹಳ್ಳಿ, ತಂದ್ರೆ, ಕರ್ಪೂರವಳ್ಳಿ, ದಿಡ್ಡಹಳ್ಳಿ, ಕಾಟ್ನಾಳು, ಹಳಿಯೂರು, ರಾವಂದೂರು, ಹೊಸೂರು ಸೇರಿ ಸುತ್ತಲಿನ ಹಲವು ಗ್ರಾಮಗಳಲ್ಲಿ ಭೂಮಿ ಕಂಪಿಸಿದೆ. ಲಘು ಭೂಕಂಪನಕ್ಕೆ ಭಯಭೀತಗೊಂಡ ಜನ ಮನೆಯಿಂದ ಹೊರಬಂದಿದ್ದಾರೆ.

ಸಂಜೆ 5.18 ಸಮಯದಲ್ಲಿ ಕೆ.ಆರ್.ನಗರ ಮತ್ತು ಅರಕಲಗೂಡು ನಡುವೆ ಕಂಪನ ಆಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ವರದಿ ಮಾಡಿದೆ.

Earthquake Report: Arakalgudu-KR Nagar Border Region; 05:18 PM, 03.04.2020; Mag: 2.6; Lat: 12.568 N: Long: 76.160 E.

Scroll to Top