ಮೈಸೂರು: ಮೈಸೂರು ಮೂಲದ ವೈದ್ಯೆ ಡಾ.ಉಮಾ ಮಧುಸೂದನ್ ಅವರು ಅಮೆರಿಕದ ಸೌತ್ ವಿಂಡ್ಸರ್ ನ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ವಿಶೇಷ ಕಾಳಜಿ ವಹಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಅವರ ಸೇವೆಯನ್ನು ಮೆಚ್ಚಿರುವ ಅಲ್ಲಿನ ಸರ್ಕಾರ ವಿಶೇಷ ಗೌರವ ಸೂಚಿಸಿದೆ.
Click Here Join Our Whats’app Group:
ಅಧಿಕಾರಿಗಳು, ಪೊಲೀಸರು ಉಮಾ ಅವರ ಮನೆಯ ಮುಂದೆ ಹತ್ತಾರು ಕಾರುಗಳಲ್ಲಿ ಪರೇಡ್ ನಡೆಸಿ ಕೃತಜ್ಞತೆ ಸಲ್ಲಿಸಿದ್ದಾರೆ. ಇವರು ಮೈಸೂರಿನವರಾಗಿದ್ದು, ಇವರ ಪೂರ್ಣ ಹೆಸರು ಉಮಾರಾಣಿ ಮಧುಸೂದನ್. ಜೆಎಸ್ಎಸ್ ಮೆಡಿಕಲ್ ಕಾಲೇಜಿನಲ್ಲಿ 1997ರಲ್ಲಿ ಮೆಡಿಕಲ್ ಪದವಿ ಪಡಿದಿದ್ದಾರೆಂದು ತಿಳಿದುಬಂದಿದೆ.
ವಿಡಿಯೋ ನೋಡಿ: