ಮೈಸೂರು: ಮೈಸೂರಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚಾದ ನಂತರ ಜಾಗೃತಿ ಮೂಡಿಸುವ ಕಾರ್ಯಗಳು ಹೆಚ್ಚಾಗಿದೆ. ನಗರದ ಎಂಜಿ ರಸ್ತೆಯ ತರಕಾರಿ ಮಾರುಕಟ್ಟೆಯಲ್ಲಿ ಇಂದಿನಿಂದ ಸ್ಯಾನಿಟೈಸರ್ ಎಂಟ್ರಿ ಪಾಥ್ ಮಾಡಲಾಗಿದ್ದು ಮಾರುಕಟ್ಟೆಗೆ ಆಗಮಿಸುವವರಿಗೆಲ್ಲಾ ದೇಹದ ಮೇಲೆ ಸ್ಯಾನಿಟೈಸರ್ ಮಾಡಲಾಗುತ್ತಿದೆ.
ಇದು ಪ್ರಾಯೋಗಿಕ ಪ್ರಯತ್ನವಾಗಿದ್ದು ಜನರಿಗೆ ಪ್ರತ್ಯೇಕವಾಗಿ ಸ್ಯಾನಿಟೈಸರ್ ನೀಡಲು ಸಾಧ್ಯವಿಲ್ಲ. ಹೀಗಾಗಿ ತರಕಾರಿ ಮಾರುಕಟ್ಟೆಗೆ ಎಂಟ್ರಿ ಕೊಡುವ ಗ್ರಾಹಕರು, ವ್ಯಾಪಾರಸ್ಥರು ಇಡೀ ದೇಹದ ಮೇಲೆ 6 ಸೆಕೆಂಡ್ ಸ್ಯಾನಿಟೈಸರ್ ಮಾಡಲಾಗುತ್ತದೆ. ಸೋಡಿಯಂ ಹೈಪೋ ಕ್ಲೋರೈಡ್ ಔಷಧಿ ಮಿಶ್ರಿತ ಸ್ಯಾನಿಟೈಸರ್ ಇದ್ದಾಗಿದ್ದು, ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಣೆ ಮಾಡಲಾಗುತ್ತಿದೆ.
ಮೈಸೂರು ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಎಂಜಿನಿಯರ್ ಸಹಾಯದಿಂದ ಈ ಮಾದರಿ ಸಿದ್ಧವಾಗಿದೆ. ಎಲ್ಲರಿಗೂ ಸ್ಯಾನಿಟೈಸರ್ ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಹೊಸ ಐಡಿಯಾ ಬಳಕೆಯಾಗಿದೆ.