ಸುತ್ತೂರು: ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವವು ಜನವರಿ 21 ರಿಂದ 26ರವರೆಗೆ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯಲಿದೆ.
“ಆರು ದಿನಗಳ ಕಾಲ ಜಾತ್ರಾ ಮಹೋತ್ಸವ ನಡೆಯಲಿದೆ. ಜಾತ್ರೆ ಅಂಗವಾಗಿ ವಸ್ತು ಪ್ರದರ್ಶನ, ಕೃಷಿ ಮೇಳ, ಸಾಂಸ್ಕೃತಿಕ ಮೇಳ, ದೋಣಿ ವಿಹಾರ, ಸೋಬಾನೆ ಪದ ಸ್ಪರ್ಧೆ, ಕ್ಯಾನ್ಸರ್ ತಪಸಾಣೆ ಶಿಬಿರ, ಸಾಮೂಹಿಕ ವಿವಾಹ, ರಾಜ್ಯಮಟ್ಟದ ಭಜನಾ ಮೇಳ, ಜನಗಳ ಜಾತ್ರೆ, ಗಾಳಿ ಪಟ ಸ್ಪರ್ಧೆ, ಕುಸ್ತಿ ಪಂದ್ಯಾವಳಿ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮ ಆಯೋಜನೆಗೊಂಡಿವೆ”.
ಜ.21ರಂದು ಬೆಳಗ್ಗೆ 8ಕ್ಕೆ ಜಾತ್ರೋತ್ಸವಕ್ಕೆ ಚಾಲನೆ ದೊರೆಯಲಿದೆ. ಧಾರ್ವಿುಕ, ಸಾಂಸ್ಕೃತಿಕ ಕಾರ್ಯಕ್ರಮ ಪ್ರತಿದಿನ ನಡೆಯಲಿದ್ದು, ವಿವಿಧ ಮಠಗಳ ಸ್ವಾಮೀಜಿಗಳು ಹಾಜರಿರುವರು. ಸಿಎಂ ಯಡಿಯೂರಪ್ಪ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳು, ಕೇಂದ್ರ ಹಾಗೂ ರಾಜ್ಯ ಸಚಿವರು ಸೇರಿ ನಾಡಿನ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಜಾತ್ರೆಯ ವಿಶೇಷತೆಗಳು:
- ಜ.21: ರಂಗೋಲಿ, ಸೋಬಾನೆ ಪದ, ದೇಸಿ ಆಟಗಳ ಸ್ಪರ್ಧೆ, ವೀರಭದ್ರೇಶ್ವರ ಕೊಂಡೋತ್ಸವ
- ಜ.22: ಸಾಮೂಹಿಕ ವಿವಾಹ, ರಾಜ್ಯಮಟ್ಟದ ಭಜನಾ ಮೇಳ.
- ಜ.23: ರಥೋತ್ಸವ, ಧಾರ್ವಿುಕ ಸಭೆ, 25ನೇ ವರ್ಷದ ದನಗಳ ಜಾತ್ರೆ.
- ಜ.24 : ಗಾಳಿಪಟ ಸ್ಪರ್ಧೆ, ಕೃಷಿ ವಿಚಾರ ಸಂಕಿರಣ, ಲಕ್ಷದೀಪೋತ್ಸವ, ಮಹದೇಶ್ವರರ ಮುತ್ತಿನ ಪಲ್ಲಕ್ಕಿ ಉತ್ಸವ.
- ಜ.25: ಚಿತ್ರಕಲಾ ಸ್ಪರ್ಧೆ, ಭಜನಾ ಮೇಳ ಹಾಗೂ ದನಗಳ ಜಾತ್ರೆ ಸಮಾರೋಪ, ಕುಸ್ತಿ ಪಂದ್ಯಾವಳಿ, ತೆಪ್ಪೋತ್ಸವ.
- ಜ.26: ಕೃಷಿಮೇಳ ಹಾಗೂ ವಸ್ತುಪ್ರದರ್ಶನ ಸಮಾರೋಪ, ಅನ್ನಬ್ರಹ್ಮೋತ್ಸವ.