ಮೈಸೂರು: ಸ್ವಚ್ಛ ಸರ್ವೇಕ್ಷಣ 2019ರ ವಿಶೇಷ ಆಂದೋಲನವನ್ನು ಮೈಸೂರು ಮಹಾಗರ ಪಾಲಿಕೆ ಹಮ್ಮಿಕೊಂಡಿದೆ. ಈ ಆಂದೋಲನಕ್ಕೆ ಪಾಲಿಕೆ ಸದಸ್ಯರು ಸಹ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.
ಗುರುವಾರ ವಾರ್ಡ್ ಸಂಖ್ಯೆ 23 ರ ಪಾಲಿಕೆ ಸದಸ್ಯರಾದ ಪ್ರಮಿಳಾ ಭರತ್ ಅವರು ಬಿಡಾರ ಕೃಷ್ಣಪ್ಪ ರಸ್ತೆಯಲ್ಲಿ ಮನೆ ಮನೆಗೆ ತೆರಳಿ, ಜಾಗೃತಿ ಮೂಡಿಸಿದರು. ಮಹಾನಗರ ಪಾಲಿಕೆ ಪ್ರಕಟಿಸಿರುವ ಕರಪತ್ರಗಳನ್ನು ವಿತರಿಸಿ, ಮೂಲದಲ್ಲೇ ಹಸಿ ಕಸ ಮತ್ತು ಒಣ ಕಸ ವಿಂಗಡಿಸುವ ಬಗ್ಗೆ ಜಾಗೃತಿ ಮೂಡಿಸಿದರು.