
ಮೈಸೂರು: ತ್ರಿವೇಣಿ ಸಂಗಮದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಮಹಾ ಕುಂಭಮೇಳಕ್ಕೆ ದಿನಗಣನೆ ಆರಂಭವಾಗಿದ್ದು, ಭಾರಿ ಸಿದ್ಧತೆ ನಡೆಯುತ್ತಿದೆ.
ಟಿ.ನರಸೀಪುರದ ಕಪಿಲ, ಕಾವೇರಿ, ಸ್ಪಟಿಕ ಮೂರು ನದಿಗಳು ಸಂಗಮವಾಗುವ ತ್ರಿವೇಣಿ ಸಂಗಮದಲ್ಲಿ ಫೆ.17, 18, 19 ರಂದು ಕುಂಭಮೇಳ ನಡೆಯಲಿದೆ. ಇದು 11 ನೇ ಕುಂಭಮೇಳವಾಗಿದ್ದು ಲಕ್ಷಾಂತರ ಭಕ್ತರು ಆಗಮಿಸಲಿದ್ದಾರೆ.
ಮಾಘ ಮಾಸದ ಪುಣ್ಯ ದಿನದಲ್ಲಿ ಸ್ನಾನ ಮಾಡಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಲಕ್ಷಾಂತರ ಭಕ್ತರು, ನಾಗಾ ಸಾಧು ಸಂತರು ಈ ಕುಂಭ ಮೇಳದಲ್ಲಿ ಭಾಗಿಯಾಗಲಿದ್ದಾರೆ.

ಭಾರಿ ಸಿದ್ಧತೆ:
ಇನ್ನು ಲಕ್ಷಾಂತರ ಭಕ್ತರು ಈ ಮಹಾ ಕುಂಭ ಮೇಳಕ್ಕೆ ಆಗಮಿಸುತ್ತಾರೆ. ಈ ದೆಸೆಯಿಂದ ತಾತ್ಕಾಲಿಕ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಮತ್ತು ಮೂಲಭೂತ ಸೌಲಭ್ಯ ಕಲ್ಪಿಸಲು ಅಧಿಕಾರಿಗಳು ಮುಂದಾಗಿದ್ದಾರೆ.
ನಾಗಾ ಸಾಧು ಸಂತರು ತ್ರಿವೇಣಿ ಸಂಗಮದ ಮಧ್ಯ ಭಾಗದಲ್ಲಿ ಯಜ್ಞ ಯಾಗಾದಿಗಳನ್ನು ಮಾಡಲಿದ್ದಾರೆ. ತ್ರಿವೇಣಿ ಸಂಗಮದ ಮಧ್ಯ ಭಾಗವು ನೂರಾರು ಅಡಿ ಆಳವಿದೆ. ಆದ್ದರಿಂದ ಮಧ್ಯ ಭಾಗದಲ್ಲಿ ಅರೆಸೇನೆ ಪಡೆಯಿಂದ ಬೃಹತ್ ಗಾತ್ರದ ತಾತ್ಕಾಲಿಕ ತೇಲುವ ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ.
You must be logged in to post a comment.