ಮೈಸೂರು: ಲಾಕ್ ಡೌನ್ ಸಡಿಲಿಕೆ ಹಿನ್ನಲೆಯಲ್ಲಿ ವನ್ಯಜೀವಿ ಪ್ರಿಯರಿಗೂ ಒಂದು ಸಿಹಿ ಸುದ್ದಿ ಇದೆ. ಕಳೆದ 85 ದಿನಗಳಿಂದ ಬಂದ್ ಆಗಿರುವ ನಾಗರಹೊಳೆ ಸಫಾರಿಯು ಸಹ ಜೂನ್ 8 ರಿಂದ ಆರಂಭಗೊಳ್ಳಲಿದೆ. ಸಪಾರಿ ಆರಂಭಿಸುವ ಬಗ್ಗೆ ಈಗಾಗಲೇ ರಾಷ್ಟ್ರೀಯ ಹುಲಿ ಪ್ರಾಧಿಕಾರ ಹಾಗೂ ಕರ್ನಾಟಕ ಸರ್ಕಾರದಿಂದ ಮಾರ್ಗಸೂಚಿ ಪ್ರಕಟಿಸಲಾಗಿದ್ದು ಇದರ ಅನ್ವಯ ಸಫಾರಿಗೆ ಅಗತ್ಯ ಸಿದ್ದತೆ ಕೈಗೊಳ್ಳಲಾಗಿದೆ.
ಇನ್ನು ನಾಗರಹೊಳೆಯಲ್ಲಿ ನಾಳೆ ಒಂದು ದಿನ ಮಾತ್ರ ಬೆಳಗಿನ ಸಫಾರಿ ಇರುವುದಿಲ್ಲ. ಮಧ್ಯಾಹ್ನದಿಂದ(3.30pm) ಸಫಾರಿ ಶುರುವಾಗುವುದು. ನಂತರ ದಿನದಲ್ಲಿ ಎಂದಿನಂತೆ ಎರಡು ಸಫಾರಿ ಇರಲಿದೆ.
ಧರದಲ್ಲಿ ಯಾವುದೇ ರೀತಿ ಬದಲಾವಣೆ ಇಲ್ಲ. ಒಂದು ಬಸ್ಸಿನಲ್ಲಿ 12 ರಿಂದ 13 ಮಂದಿಗೆ ಅವಕಾಶ. 8 ಕ್ಕಿಂತ ಕೆಳಗಿರುವ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಪ್ರವೇಶವಿಲ್ಲ. ಮಾಸ್ಕ್ ಧರಿಸುವುದು ಖಡ್ಡಾಯವಾಗಿದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.