ಮೈಸೂರು: ಮೈಸೂರಿನಲ್ಲಿ ಅನುಮಾನಸ್ಪದವಾಗಿ ಮತ್ತೊಂದು ಹುಲಿ ಸಾವನ್ನಪ್ಪಿದೆ.
ಹೆಚ್.ಡಿ.ಕೋಟೆ ತಾಲೂಕಿನ ಟೈಗರ್ ಬ್ಲಾಕ್‌ನಲ್ಲಿ ಹುಲಿ ಶವ ಪತ್ತೆಯಾಗಿದ್ದು ಹುಲಿಗೆ ವಿಷ ಹಾಕಿ ಕೊಂದಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಕೊಳೆತ ಸ್ಥಿತಿಯಲ್ಲಿ ಹುಲಿಯ ಮೃತದೇಹ ಪತ್ತೆಯಾಗಿದ್ದು, ಕಳೆದ ವಾರವಷ್ಟೇ ಒಂದು ಹುಲಿ ಮೃತಪಟ್ಟಿತ್ತು. ಇದೀಗಾ ಮತ್ತೊಂದು ಹುಲಿ ಶವಪತ್ತೆಯಾಗಿ ಆತಂಕ ಸೃಷ್ಠಿಯಾಗಿದೆ.
ಇನ್ನು ಹುಲಿಗಳ ಸಾವು ಅರಣ್ಯ ಇಲಾಖೆಗೆ ತಲೆ ಬಿಸಿಯಾಗಿದ್ದು ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.