
ಮೈಸೂರು: ಹೆಬ್ಬಾವೊಂದು ತನ್ನ ದಾರಿಗೆ ಅಡ್ಡ ಬಂದಾಗ, ಹುಲಿ ಅದನ್ನು ಎದುರಿಸಿದ ಪರಿಯನ್ನು ತೋರುವ ವಿಡಿಯೋ ಒಂದನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತಾ ನಂದಾ ಅವರು ಇತ್ತೀಚೆಗೆ ಶೇರ್ ಮಾಡಿದ್ದರು. ಅದು ಬಹಳ ವೈರಲ್ ಕೂಡ ಆಗಿತ್ತು.
ಹೆಬ್ಬಾವಿನ ಹತ್ತಿರ ಹೋದಾಗ ಅದು ಬುಸ್ಸೆಂದ ಕೂಡಲೇ ಹಿಂದಡಿ ಇಡುವ ಹುಲಿ, ಯಾಕೋ ಅದರ ಸಹವಾಸಕ್ಕೆ ಹೋದರೆ ಸರಿಯಲ್ಲ ಎಂದುಕೊಂಡು, ಅದು ಮಲಗಿದ್ದ ಜಾಗವನ್ನು ಬಿಟ್ಟು ಬೇರೆ ದಾರಿಯನ್ನು ಬಳಸಿಕೊಂಡು ಮುಂದೆ ಹೋಗುತ್ತದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಿನ್ನಲೆ ರಾಜ್ಯ ಮತ್ತು ರಾಷ್ಟೀಯ ಮಾಧ್ಯಮಗಳಲ್ಲಿ ಈ ಸುದ್ದಿ ಸದ್ದು ಮಾಡಿತ್ತು.
ಅಸಲಿಗೆ ಈ ವಿಡಿಯೋದ ಹಿನ್ನಲೆ ನೋಡುವುದಾದರೆ 2 ವರ್ಷ ಹಳೆಯದ್ದು. ಮೈಸೂರಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಅರಣ್ಯದೊಳಗಿನ ರಸ್ತೆಯ ಮೇಲೆ ಹುಲಿ ತನ್ನ ಪಾಡಿಗೆ ತಾನು ರಾಜಗಾಂಭೀರ್ಯದಿಂದ ನಡೆದು ಹೋಗುತ್ತಿದ್ದಾರೆ, ಬೃಹತ್ ಹೆಬ್ಬಾವೊಂದು ರಸ್ತೆ ದಾಟುತ್ತಿತ್ತು. ವನ್ಯಪ್ರೇಮಿಯೊಬ್ಬರು ಚಿತ್ರೀಕರಿಸಿದ್ದ ಈ ಹಳೆಯ ವಿಡಿಯೊ ಇದೀಗ ಮತ್ತೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಈ ವಿಡಿಯೊವನ್ನು ಕಬಿನಿಯ ಎವಾಲ್ವ್ ಬ್ಯಾಕ್ ರೆಸಾರ್ಟ್ಸ್‌ನ ಪರಿಸರ ಪ್ರೇಮಿ ಶರತ್ ಅಬ್ರಹಾಂ ಎಂಬುವರು ಚಿತ್ರೀಕರಿಸಿದ್ದಾರೆ. ಅವರ ಪ್ರಕಾರ, ಆಗಸ್ಟ್ 31, 2018 ರಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಮೀಸಲು ಪ್ರದೇಶದಲ್ಲಿ ಹಾವು ಮತ್ತು ಹುಲಿಯ ನಡುವಿನ ಘಟನೆಯನ್ನು ಚಿತ್ರೀಕರಿಸಲಾಗಿದೆ. ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಟ್ವಿಟರ್‌ನಲ್ಲಿ ವಿಡಿಯೊ ಹಂಚಿಕೊಳ್ಳುವ ಮೂಲಕ ಮತ್ತೆ ಸಾಮಾಜಿಕ ಮಾಧ್ಯಮಗಳ ಗಮನ ಸೆಳೆದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ 44 ಸೆಕೆಂಡ್ ಇರುವ ವಿಡಿಯೋ ವೈರಲ್ ಆಗಿದ್ದು ಇದರ ಪುರ್ತಿ ವಿಡಿಯೋ ಇಲ್ಲಿದೆ ನೋಡಿ.
You must be logged in to post a comment.