
ಮೈಸೂರು: ಮೈಸೂರು-ಬೆಂಗಳೂರು ನಡುವೆ ಪ್ರಯಾಣಿಸುವ ಜನರಿಗೆ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದೆ. ಪ್ರಯಾಣಿಕರ ಒತ್ತಾಯದ ಮೇಲೆ 11 ರೈಲುಗಳ ವೇಗವನ್ನು ನ. 13ರಿಂದ ಹೆಚ್ಚಿಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ.
ಈವರೆಗೂ ಮೈಸೂರು-ಬೆಂಗಳೂರು ನಡುವಿನ ಪ್ರಯಾಣದ ಅವಧಿ ಎರಡೂವರೆ ಗಂಟೆಯಿಂದ ಮೂರು ಗಂಟೆ ಇಪ್ಪತ್ತು ನಿಮಿಷ ಇತ್ತು. ಆದರೆ ಇದೀಗ ರೈಲುಗಳ ಪ್ರಯಾಣದ ಅವಧಿಯು ಕನಿಷ್ಠ ಎರಡೂಕಾಲು ಗಂಟೆಗೆ ಇಳಿದಿದೆ. ರೈಲಿನ ವೇಗವನ್ನು ತುಸು ಹೆಚ್ಚಿಸಲಾಗಿದ್ದು, ಗಂಟೆಗೆ 100 ಕಿ.ಮೀ. ವೇಗ ತಡೆದುಕೊಳ್ಳುವ ಸಾಮರ್ಥ್ಯ ಹೊಸ ಹಳಿಗಳಿಗಿದೆ. ಆದರೆ ಈಗ ರೈಲುಗಳು ಗರಿಷ್ಠ 90ರಿಂದ 95 ಕಿ.ಮೀ. ವೇಗದಲ್ಲಿ ಓಡುತ್ತಿವೆ.
ನೈರುತ್ಯ ರೈಲ್ವೆ ಕೈಗೊಂಡಿರುವ ಈ ಬದಲಾವಣೆಯಿಂದ ಮೈಸೂರಿಗೆ ಬೆಂಗಳೂರು ನಗರ ಮತ್ತಷ್ಟು ಹತ್ತಿರವಾದಂತಾಗಿದೆ. ಅಂತೆಯೇ ನ.14ರಿಂದ ಹೊಸ ವೇಳಾಪಟ್ಟಿ ಜಾರಿಗೆ ಬರಲಿದೆ.
ಮೈಸೂರಿನಿಂದ ಬೆಂಗಳೂರಿಗೆ ತೆರಳುವ 6 ರೈಲು ಹಾಗೂ ಬೆಂಗಳೂರಿನಿಂದ ಮೈಸೂರಿಗೆ ಆಗಮಿಸುವ 5 ರೈಲುಗಳ ವೇಗ ಹೆಚ್ಚಿಸಲಾಗುತ್ತಿದೆ. ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿರೈಲುಗಾಡಿಗಳ ನಿಲುಗಡೆಗೆ ಅವಕಾಶ ದೊರೆಯುತ್ತಿರುವ ಹಿನ್ನೆಲೆಯಲ್ಲಿರೈಲುಗಾಡಿಗಳ ವೇಗವನ್ನು ಹೆಚ್ಚಿಸಿ ಪ್ರಯಾಣಾವಧಿಯನ್ನು ತಗ್ಗಿಸಲಾಗಿದೆ.
ಯಾವ ರೈಲಿಗೆ ವೇಗ ಸ್ಪರ್ಶ:
- ಮೈಸೂರಿನಿಂದ ಬೆಂಗಳೂರಿಗೆ ಹೋಗುವ ಒಟ್ಟು 6 ರೈಲುಗಳು
- ಜೈಪುರ ಮೈಸೂರು ಎಕ್ಸ್‌ಪ್ರೆಸ್ (12975) ರೈಲು ಈ ಮೊದಲು 2.25 ಗಂಟೆ ಪ್ರಯಾಣ ಅವಧಿಯಿತ್ತು. ಈಗ 2.15ಕ್ಕೆ ಕುಗ್ಗಿದೆ.
- ಕಾಚಿಗುಡ ಎಕ್ಸ್‌ಪ್ರೆಸ್ (12786) 2.55ರಿಂದ 2.25 ಗಂಟೆಗೆ,
- ಸೊಲ್ಲಾಪುರ ಎಕ್ಸ್‌ಪ್ರೆಸ್ (16535) 3 ರಿಂದ 2.45 ಗಂಟೆಗೆ,
- ಮೈಲಾಡುತುರೈ ಎಕ್ಸ್‌ಪ್ರೆಸ್ (16232) 2.30ರಿಂದ 2.25 ಗಂಟೆ,
- ಟ್ಯುಟಿಕಾರಿನ್ ಎಕ್ಸ್‌ಪ್ರೆಸ್ (16236) 3.00ರಿಂದ 2.45 ಗಂಟೆ,
- ಚಾಮರಾಜನಗರ ತಿರುಪತಿ ಎಕ್ಸ್‌ಪ್ರೆಸ್ (16219) 3.20ರಿಂದ 3.10 ಗಂಟೆಗೆ ಇಳಿದಿದೆ. ಇದು ನ.14ರಿಂದ ಜಾರಿಗೆ ಬರಲಿದೆ.
- ಬೆಂಗಳೂರಿನಿಂದ ಮೈಸೂರಿಗೆ ಬರುವ 5 ರೈಲುಗಳು
- ವಾರಾಣಸಿ ಎಕ್ಸ್‌ಪ್ರೆಸ್ (16230) 2.30ರಿಂದ 2.15 ಗಂಟೆ, ರೇಣಿಗುಂಟ ಎಕ್ಸ್‌ಪ್ರೆಸ್ (11066) 2.30ರಿಂದ 2.15 ಗಂಟೆ,
- ಹೌರಾ ಎಕ್ಸ್‌ಪ್ರೆಸ್ (22817) 2.55ರಿಂದ 2.25 ಗಂಟೆ,
- ಮೈಲಾಡುತುರೈ ಎಕ್ಸ್‌ಪ್ರೆಸ್ (16231) 2.30ರಿಂದ 2.20 ಗಂಟೆ,
- ಜೈಪುರ ಎಕ್ಸ್‌ಪ್ರೆಸ್ (12976) 2.45ರಿಂದ 2.30 ಗಂಟೆಗೆ ಇಳಿದಿದೆ. ಇ
- ದರೊಂದಿಗೆ ರೈಲುಗಳು ಹೊರಡುವ ವೇಳಾಪಟ್ಟಿಯಲ್ಲಿ ವ್ಯತ್ಯಾಸವಾಗಿದೆ.