
ಮೈಸೂರು: ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಹಾಡಿ ಮಕ್ಕಳು ಯಶಸ್ವಿ ಹಿಮಾಲಯ ಚಾರಣ ಮುಗಿಸಿ ಬಂದಿದ್ದಾರೆ. ನಾಗರಹೊಳೆ ಹಾಗೂ ಬಂಡೀಪುರದ ಆದಿವಾಸಿ ಮಕ್ಕಳು, ಇದೀಗಾ ಹಿಮಾಲಯದ ಶಿಖರವನ್ನೇರಿ ತ್ರಿವರ್ಣ ಧ್ವಜ ಹಾರಿಸಿ ಸಾಧನೆ ಮಾಡಿದ್ದಾರೆ.
ಮೈಸೂರಿನ ಟೈಗರ್ ಫೌಂಡೇಶನ್ ಹಾಗೂ ಲೇಡಿ ಸರ್ಕಲ್ ಆಫ್ ಇಂಡಿಯಾ ಸಹಯೋಗದೊಂದಿಗೆ ನಡೆದಿದ್ದ ಚಾರಣದಲ್ಲಿ 41 ಜನರ ತಂಡ ಭಾಗವಹಿಸಿತ್ತು. 15 ದಿನಗಳ ಕಾಲ ಪ್ರವಾಸದಲ್ಲಿ ಹಿಮಗಿರಿ ಶಿಖರ ಏರಿ ಯುವತಿಯರು ಸಂತಸಪಟ್ಟಿದ್ದಾರೆ.

ಮೈಸೂರು ಜಿಲ್ಲೆಯ ಎಚ್.ಡಿ ಕೋಟೆ ತಾಲ್ಲೂಕಿನ ವಿವೇಕ ಬುಡಕಟ್ಟು ಕಲಿಕಾ ಕೇಂದ್ರದ ವಿದ್ಯಾರ್ಥಿಗಳು ಇವತ್ತು ಹಿಮಾಲಯದ ಹಿಮಾಚಲ ಪ್ರದೇಶದ ಧೌಲಾರ್ಧ ರೇಂಜ್‌ನಲ್ಲಿರುವ 14 ಸಾವಿರ ಅಡಿ ಎತ್ತರದ ಸೌರ್ಕುಂಡ ಪಾಸ್ ಶಿಖರವನ್ನೇರಿದ್ದಾರೆ. ಟೈಗರ್ ಅಡ್ವೆಂಚರ್ ಫೌಂಡೇಷನ್, ಲೇಡಿಸ್ ಸರ್ಕಲ್ ಇಂಡಿಯಾ ವತಿಯಿಂದ ಹಾಡಿ ವಿದ್ಯಾರ್ಥಿಗಳಿಗಾಗಿ ವಿಶೇಷ ಚಾರಣವನ್ನು ಆಯೋಜಿಸಲಾಗಿತ್ತು. ಈ ಚಾರಣದಲ್ಲಿ 12 ಜನ ಬುಡಕಟ್ಟು ಕಲಿಕಾ ಕೇಂದ್ರದ ವಿದ್ಯಾರ್ಥಿನಿಯರು, ಇಬ್ಬರು ಗ್ರಾಮೀಣ ವಿದ್ಯಾರ್ಥಿನಿಯರು ಸೇರಿದಂತೆ ವಿವಿಧ ಜಿಲ್ಲೆಯ ಒಟ್ಟು 41ಮಂದಿ ಮೈಸೂರಿನಿಂದ ತೆರಳಿ ಹಿಮಾಲಯವನ್ನ ಏರಿದ್ದಾರೆ.
ಮೇ 1ಕ್ಕೆ ಮೈಸೂರಿನಿಂದ ಹೊರಟ ತಂಡ, ನಂತರ ದೆಹಲಿ ತಲುಪಿ ಅಲ್ಲಿಂದ ಮೇ 9ಕ್ಕೆ ಸರಿಯಾಗಿ ಬೆಳಗ್ಗೆ 9 ಗಂಟೆ 12ನಿಮಿಷಕ್ಕೆ ಹಿಮಾಲಯ ಏರಿ ಗುರಿ ಮುಟ್ಟಿದ್ದಾರೆ. ಇದಕ್ಕಾಗಿ ಸ್ಥಳೀಯ ಸಿಬ್ಬಂದಿಗಳ ಸಹಾಯ ಪಡೆದು, ಮಾಹಿತಿಯನುಸಾರವಾಗಿ ಚಾರಣದ ಉಪಕರಣಗಳ ಸಮೇತವಾಗಿ ಹಿಮಾಲಯ ಏರಿದ್ದಾರೆ.
ಶಿಖರ ಏರುವ ಕನಸು ನನಸು ಮಾಡಿಕೊಂಡ ಖುಷಿಯಲ್ಲಿ ಯುವತಿಯರು ಸುರಕ್ಷಿತವಾಗಿ ಮರಳಿದ್ದಾರೆ. ಹೇಗಿತ್ತು ಅವರ ಚಾರಣ..? ಇಲ್ಲಿದೆ ನೋಡಿ.
You must be logged in to post a comment.