
ಮೈಸೂರು: ಟೆಂಪಲ್ ಆಫ್ ಮಾರ್ಷಲ್ ಆರ್ಟ್ಸ್ ಒಕಿನವಾ ಶೋಟೊಕನ್ ಕರಾಟೆ ಡು ಅಸೋಸಿಯೇಷನ್ ವತಿಯಿಂದ ಭಾನುವಾರ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಕರಾಟೆ ಸ್ಪರ್ಧೆಯಲ್ಲಿ ನಗರದ ಪ್ರತಿಭಾನ್ವಿತ ಕರಾಟೆಪಟು ದಿಯಾ ಅರಸ್ ಎರಡು ಚಿನ್ನದ ಪದಕ ಗಳಿಸಿದ್ದಾರೆ.
ಸುಮಾರು 600ಕ್ಕೂ ಹೆಚ್ಚು ಕರಾಟೆ ಪಟುಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, ವಿಶೇಷವಾಗಿ ಈ ಪಂದ್ಯಾವಳಿಯಲ್ಲಿ ಪುರುಷರ (-16 & +16 ವರ್ಷ) ಹಾಗೂ ಮಹಿಳೆಯರ (ವಯೋಮಿತಿ ಇಲ್ಲ) ಒಪನ್ ಕಟಾ ಮತ್ತು ಕುಮಿಟೆ ಗ್ರ್ಯಾಂಡ್ ಚಾಂಪಿಯನ್ ಶಿಪ್ ನ್ನು ಆಯೋಜಿಸಲಾಗಿತ್ತು.
ನಗರದ ಜಯಲಕ್ಷ್ಮಿ ಪುರಂನ ವಿದ್ಯಾಶ್ರಮ ಕಾಲೇಜಿನಲ್ಲಿ ಓದುತ್ತಿರುವ ಹಾಗೂ ಪ್ರಸ್ತುತ ಕರ್ನಾಟಕ ಕರಾಟೆ ಕಟಾ ವಿಭಾಗದಲ್ಲಿ ಅಗ್ರ ಶ್ರೇಯಾಂಕ ಹೊಂದಿರುವ ದಿಯಾ ಅರಸ್ ಈ ಪಂದ್ಯಾವಳಿಯಲ್ಲಿ ಭಾಗವಹಿಸಿ ಮೊದಲು, 21 ವರ್ಷದೊಳಗಿನ ಬಾಲಕೀಯರ ಕಟಾ ವಿಭಾಗದ ಫೈನಲ್ಸ್‍ನಲ್ಲಿ ದಾವಣಗೆರೆಯ ಚಿತ್ರಶ್ರೀಯನ್ನು 5-0 ಅಂತರದಲ್ಲಿ ಸೋಲಿಸಿ ಚಿನ್ನದ ಪದಕವನ್ನು ಪಡೆದರು.

ನಂತರ ಮಹಿಳೆಯರ ಒಪನ್ ಕಟಾ ಗ್ರ್ಯಾಂಡ್ ಚಾಂಪಿಯನ್ ಶಿಪ್ ನ ಕ್ವಾಟರ್ ಫೈನಲ್ಸ್‍ನಲ್ಲಿ ಬೆಂಗಳೂರಿನ ಸಾಕ್ಷಿಯನ್ನು 5-0, ಸೆಮಿಫೈನಲ್ಸ್ ನಲ್ಲಿ ಬೆಳಗಾಂನ ನಂದಿತಾಳನ್ನು 5-0 ಹಾಗೂ ಫೈನಲ್ಸ್‍ನಲ್ಲಿ ಬೆಂಗಳೂರಿನ ಕೀರ್ತಿಯನ್ನು ಕೂಡ 5-0 ಅಂತರದಲ್ಲಿ ಸೋಲಿಸಿ ಗ್ರ್ಯಾಂಡ್ ಚಾಂಪಿಯನ್ ಶಿಪ್ ಟ್ರೋಫಿ ಮತ್ತು ನಗದು ಬಹುಮಾನ ತಮ್ಮದಾಗಿಸಿಕೊಂಡರು. ವಿಜೇತ ವಿದ್ಯಾರ್ಥಿನಿಯನ್ನು ಕಾಲೇಜು ಆಡಳಿತ ಮಂಡಳಿ, ಅಧ್ಯಾಪಕ ವೃಂದ ಅಭಿನಂದಿಸಿದೆ.
ದಿಯಾ ಅರಸ್ ರಾಷ್ಟ್ರ -21 ವರ್ಷದೊಳಗಿನ ಕರಾಟೆ ಕಟಾ ವಿಭಾಗದಲ್ಲಿ 2ನೇ ಶ್ರೇಯಾಂಕ ಹಾಗೂ ರಾಷ್ಟ್ರ ಹಿರಿಯರ ಮಹಿಳೆಯರ ವಿಭಾಗದಲ್ಲಿ 3ನೇ ಶ್ರೇಯಾಂಕ ಹೊಂದಿರುತ್ತಾರೆ.
3ನೇ ಡಿಗ್ರಿ ಬ್ಯಾಕ್ ಬೆಲ್ಟ್ ಹೊಂದಿರುವ ದಿಯಾ ಅರಸ್ ಗೆ ಕರಾಟೆ ಅಸೋಸಿಯೇಷನ್ ಆಫ್ ಇಂಡಿಯಾ, ಅಧಿಕೃತ ತರಬೇತುದಾರರಾದ ಅವರ ತಂದೆ ಶ್ರೀನಾಥ್ ಅರಸ್ ಅವರು ತಯಾರಿ ನೀಡುತ್ತಿದ್ದಾರೆ. ಇವರಿಬ್ಬರೂ ಆಲ್ ಇಂಡಿಯಾ ಶಿಟೊ ರಿಯು ಕರಾಟೆ ದೊಯುನಿಯನ್ ಅಧ್ಯಕ್ಷರಾದ ಸಿ.ಎಸ್. ಅರುಣ್ ಮಾಚಯ್ಯ ಹಾಗೂ ಶುಕೊ ಕಾಯ್ ಶಿಟೊ ರಿಯು ಕರಾಟೆ ಡೊ ಆಫ್‍ಇಂಡಿಯಾ ಮೂಖ್ಯಸ್ಥರಾದ ಈ. ಎಸ್. ಕುಮಾರ್ ಇವರುಗಳ ಮಾರ್ಗದರ್ಶನದಲ್ಲಿ ಕರಾಟೆ ಅಭ್ಯಾಸ ಮಾಡುತ್ತಿದ್ದಾರೆ.
You must be logged in to post a comment.