ತ್ರಿವೇಣಿ ಸಂಗಮದಲ್ಲಿ ಯುಗಾದಿ ಪುಣ್ಯ ಸ್ನಾನ ಮಾಡಿ ಪುನಿತರಾದ ಸಹಸ್ರಾರು ಜನ

ತಿ.ನರಸೀಪುರ: ಕಾಶಿಗಿಂತಲೂ ಗುಲಗಂಜಿ ತೂಕದಷ್ಟು ಪುಣ್ಯ ಕ್ಷೇತ್ರ ವೆಂದು ಪ್ರತೀತಿ ಹೊಂದಿರುವ ತ್ರಿವೇಣಿ ಸಂಗಮದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಯುಗಾದಿ ಪುಣ್ಯ ಸ್ನಾನ ಮಾಡಿ ಪುನಿತರಾದರು.

ಪಟ್ಟಣದ ಅಗಸ್ತ್ಯೇಶ್ವರ ಮತ್ತು ಶ್ರೀ ಗುಂಜಾನರಸಿಂಹ ಸ್ವಾಮಿ ದೇವಲಾಯಗಳ ಮದ್ಯ ಭಾಗದಲ್ಲಿ ಹರಿಯುವ ಕಾವೇರಿ ಕಬಿನಿ ಮತ್ತು ಗುಪ್ತಗಾಮಿನಿಯಾಗಿ ಹರಿಯುವ ಸ್ಪಟಿಕ ಸರೋವರಗಳ ಸಂಗಮದ ಸ್ಥಳವಾದ ತ್ರಿವೇಣಿ ಸಂಗಮದಲ್ಲಿ ನಾನಾ ಕಡೆಯಿಂದ ಚಾಂದ್ರಾಮಾನ ಯುಗಾದಿ ಪ್ರಯುಕ್ತ ಆಗಮಿಸಿ ಬೆಳಗಿನ ಜಾವ 4 ಗಂಟೆಯಿಂದಲೆ ಪುಣ್ಯ ಸ್ನಾನ ಮಾಡಿದರು.

ಪಟ್ಟಣಕ್ಕೆ ರಾತ್ರಿಯಿಂದಲೆ ತಂಡೊಪ ತಂಡವಾಗಿ ಆಗಮಿಸಿದ ಜನರು ಬೆಳ್ಳಿಗ್ಗೆ ಸೂರ್ಯೋದಯಕ್ಕೂ ಮೊದಲೆ ಸ್ನಾನ ಮಾಡಲಾರಂಭಿಸಿದರು .

ಪುಣ್ಯ ಸ್ನಾನ ಮಾಡಿದ ಭಕ್ತರು ನದಿ ದಡದಲ್ಲಿರುವ ದೇವಯಗಳಲ್ಲಿ ದರ್ಶನ ಪಡೆದರು.

ಪುಣ್ಯ ಕ್ಷೇತ್ರದ ಮಹಿಮೆ:

ಕಾವೇರಿ ಕಬಿನಿ ಮತ್ತು ಸ್ಪಟಿಕ ಮೂರು ನದಿಗಳು ಸಂಗಮವಾಗುತ್ತದೆ ಅಲ್ಲದೆ ನದಿಯ ಮದ್ಯ ಭಾಗದಲ್ಲಿ ರುಧ್ರ ಪಾದ ಹಾಗೂ ವಿಷ್ಣು ಪಾದವಿದೆ ನದಿಯ ದಡದಲಿ ಅಗಸ್ತ್ಯೇಶ್ವರ ದೇವಾಲಯವಿದೆ ಹಾಗೂ ಲಕ್ಷ್ಮಿ ಸಮೇತ ನರಸಿಂಹಸ್ವಾಮಿ ದೇವಲಾಯವಿದೆ ಹಾಗೂ ಅಗಸ್ತ್ಯ ಮುನಿಗಳು ತಪಸ್ಸು ಮಾಡಿದ ಸ್ಥಳ ವಾಗದೆ ಈ ಎಲ್ಲಾ ಕಾರಣಗಳಿಂದ ಈ ಸ್ಥಳ ಕಾಶಿಗಿಂತಲೂ ಗುಲಗಂಜಿ ತೂಕ ದಷ್ಟು ಪುಣ್ಯ ಜಾಸ್ತಿ ಎಂದು ಪುರಾಣ ಹೇಳುತದೆ ಹಾಗಾಗಿ ಯುಗಾದಿ ದಿನ ಜನರು ಇಲ್ಲಿ ಸ್ನಾನ ಮಾಡಿ ಭಗವಂತನ ಮೊರೆ ಇಟ್ಟರೆ ಪಾಪ ವಿಮೋಚನೆ ಆಗುತ್ತದೆ ಎಂದು ಹೇಳುತ್ತಾರೆ.

Scroll to Top