
ಮೈಸೂರು: ದೇಶದ ಅತ್ಯುತ್ತಮ ( NIRF RANKING ) ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಮೈಸೂರು ವಿವಿಗೆ 54 ನೇ ಸ್ಥಾನ ದೊರೆತಿದೆ. ಈ ಮೂಲಕ ರಾಜ್ಯದ ವಿವಿಗಳ ಪೈಕಿ ಮೈಸೂರು ವಿವಿ ಮೊದಲ ಸ್ಥಾನ ಗಳಿಸಿದೆ.
ನಿನ್ನೆ ರಾಷ್ಟ್ರಪತಿಗಳಿಂದ ದೇಶದ ವಿವಿಧ ವಿವಿಗಳ ರ್ಯಾಂಕಿಂಗ್ ಪಟ್ಟಿ ಬಿಡುಗಡೆ ಮಾಡಲಾಯಿತು. ನವದೆಹಲಿಯ ವಿಜ್ಞಾನ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೊವಿಂದ್ ಪಟ್ಟಿ ಬಿಡುಗಡೆ ಮಾಡಿದರು. ನ್ಯಾಷನಲ್ ಇನ್ಸ್ಟಿಟ್ಯೂಟ್ ರ್ಯಾಂಕಿಂಗ್ ಫ್ರೇಮ್ ವರ್ಕ್ ಅಡಿ ಕೇಂದ್ರ ಸರ್ಕಾರದ ಮಾನವ ಅಭಿವೃದ್ಧಿ ಸಚಿವಾಲಯದ ಆಶ್ರಯದಲ್ಲಿ ದೇಶದ ಎಲ್ಲಾ ವಿವಿಗಳ ಸ್ಥಾನ ಮಾನ ಗುರುತಿಸುವ ಪ್ರಯತ್ನ ನಡೆಸಲಾಯಿತು.
#PresidentKovind releases NIRF India Rankings-2019 and the Atal Ranking of Institutions on Innovation Achievement; says it is critical that there be a significant Indian presence in global rankings of leading universities and higher educational institutions in the near future pic.twitter.com/lWf7ycKouO
— President of India (@rashtrapatibhvn) April 8, 2019
2019 ರ ವಿವಿಗಳ ಱಂಕಿಂಗ್ ಸ್ಪರ್ಧೆಯಲ್ಲಿ ದೇಶದ 4867 ವಿವಿಗಳು ಭಾಗವಹಿಸಿದ್ದವು. ಱಂಕಿಂಗ್ನ 9 ವರ್ಗಗಳಲ್ಲಿ ಮೈಸೂರು ವಿವಿಗೆ 54 ನೇ ರ್ಯಾಂಕ್ ಸಿಕ್ಕಿದೆ. ಕರ್ನಾಟಕದ ಸಾರ್ವಜನಿಕ ವಿವಿಗಳ ಪೈಕಿ ಮೊದಲ ಸ್ಥಾನ ಪಡೆದಿದೆ. 2017 ರಿಂದ ಈ ಸರ್ವೆ ಆರಂಭವಾಗಿದ್ದು, ಸರ್ವೆಯಲ್ಲಿ ಮೊದಲನೇ ಬಾರಿ ಮೈಸೂರು ವಿವಿ 36 ನೇ ಸ್ಥಾನ ಪಡೆದಿದ್ದು, ಈ ಬಾರಿ 54 ನೇ ಸ್ಥಾನ ಪಡೆದಿದೆ.
You must be logged in to post a comment.